alex Certify ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಬಂದಿದೆ ಹೊಸ ಅತಿಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಬಂದಿದೆ ಹೊಸ ಅತಿಥಿ 

ತೆಲುಗಿನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪರಿಸರ ರಕ್ಷಣೆ ಬಗೆಗಿನ ತಮ್ಮ ಜವಾಬ್ಧಾರಿಯನ್ನು ಅರಿತಿರೋ ಮಹೇಶ್‌ ಬಾಬು, ಆಡಿ ಇ-ಟ್ರಾನ್‌ ಕಾರನ್ನು ಖರೀದಿಸಿದ್ದಾರೆ.

ಇದು ಎಲೆಕ್ಟ್ರಿಕ್‌ ಕಾರು, ಕಳೆದ ವರ್ಷ ಈ SUV ಯನ್ನು ಆಡಿ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಬಲವಾದ ಕಾರ್ಯಕ್ಷಮತೆ ಹೊಂದಿರೋ ಆಡಿ ಇ-ಟ್ರಾನ್‌, ನೋಡಲು ಕೂಡ ಅಷ್ಟೇ ಆಕರ್ಷಕವಾಗಿದೆ. ಆಡಿ ಇ-ಟ್ರಾನ್ ಎಲೆಕ್ಟ್ರಿಕ್ SUV ಕಾರಿನ ವಿನ್ಯಾಸ ಕೂಡ ಬಹಳ ಅಂದವಾಗಿದೆ.

ದೊಡ್ಡ ಗ್ರಿಲ್, ಹಳದಿ ಬಣ್ಣದ ಕ್ಯಾಲಿಪರ್‌ ಈ ಕಾರಿನ ವಿಶೇಷತೆ. 20 ಇಂಚಿನ ಚಕ್ರಗಳನ್ನು ಇದಕ್ಕೆ ಅಳವಡಿಸಲಾಗಿದೆ. ಕಾರಿನ ಎರಡೂ ಬದಿಗಳಲ್ಲಿ ಚಾರ್ಜಿಂಗ್ ಪೋರ್ಟ್‌ಗಳಿವೆ. ಪನೋರಮಿಕ್ ಸನ್‌ರೂಫ್, 4-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಆಂಬಿಯೆಂಟ್ ಲೈಟಿಂಗ್ ಮತ್ತು ಕ್ಯಾಬಿನ್‌ನಲ್ಲಿ ಏರ್ ಪ್ಯೂರಿಫೈಯರ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳಿವೆ.

ಆಡಿ ಈ ಕಾರಿನೊಂದಿಗೆ 11 kW AC ವಾಲ್ ಚಾರ್ಜರ್ ಅನ್ನು ಒದಗಿಸಿದೆ, ಇದನ್ನು 15 amp ಸಾಕೆಟ್‌ಗೆ ಹಾಕಿ ಚಾರ್ಜ್‌ ಮಾಡಬಹುದು. ಇ-ಟ್ರಾನ್ ಎಲೆಕ್ಟ್ರಿಕ್ SUV ಯಲ್ಲಿ, ಕಂಪನಿಯು 95 kWh ಗಂಟೆ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದೆ. ಇದು ಎರಡೂ ಎಕ್ಸಲ್‌ಗಳಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಮೋಟರ್‌ಗಳಿಗೆ ಶಕ್ತಿ ನೀಡುತ್ತದೆ. ಒಮ್ಮೆ ಚಾರ್ಜ್‌ ಮಾಡಿದ್ರೆ ಈ ಕಾರು 484 ಕಿಮೀ ದೂರ ಚಲಿಸಬಲ್ಲದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...