alex Certify ಸುಲಭವಾಗಿ ಮನೆಯಲ್ಲೇ ಮಾಡಿ ಟೇಸ್ಟಿ ಟೇಸ್ಟಿ ವೆಜ್​ ಪಿಜ್ಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮನೆಯಲ್ಲೇ ಮಾಡಿ ಟೇಸ್ಟಿ ಟೇಸ್ಟಿ ವೆಜ್​ ಪಿಜ್ಜಾ

ಬೇಕಾಗುವ ಸಾಮಗ್ರಿ:

ಮೈದಾ ಹಿಟ್ಟು 1 1/2 ಕಪ್​, ಯೀಸ್ಟ್ 1 1/2 ಚಮಚ, ಸಕ್ಕರೆ 1 ಚಮಚ, ಅಡುಗೆ ಎಣ್ಣೆ, ಚೀಸ್​, ಪಿಜ್ಜಾ ಮಸಾಲೆ, ದೊಡ್ಡ ಮೆಣಸು (ಹಳದಿ & ಕೆಂಪು), ಈರುಳ್ಳಿ 1, ಕರಿ ಓಲಿವ್ಸ್, ಸ್ವೀಟ್​ ಕಾರ್ನ್​ 1/2 ಕಪ್​, ಕೆಂಪು ಮೆಣಸಿನ ಚೂರು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟನ್ನ ತೆಗೆದುಕೊಳ್ಳಿ. ಇದಕ್ಕೆ ಇನ್ಸ್ಟಂಟ್​ ಈಸ್ಟ್​​ನ್ನು ಸೇರಿಸಿ, ಬಳಿಕ ಸಕ್ಕರೆ, ಉಪ್ಪು ಹಾಕಿ ಕಲಿಸಿಕೊಳ್ಳಿ. ಇದಾದ ಬಳಿಕ ಈ ಮಿಶ್ರಣಕ್ಕೆ ಎಣ್ಣೆ ಹಾಗೂ ಬಿಸಿ ನೀರನ್ನ ಹಂತ ಹಂತವಾಗಿ ಮಿಕ್ಸ್ ಮಾಡುತ್ತಾ ನಾದಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಬರ್ತಿದ್ದಂತೆಯೇ ಅದರ ಮೇಲೆ ಎಣ್ಣೆಯನ್ನ ಸವರಿ ಪಾತ್ರೆಯನ್ನ ತೆಳುವಾದ ಬಟ್ಟೆಯಿಂದ ಮುಚ್ಚಿಡಿ. 1 ರಿಂದ 2 ಗಂಟೆಗಳ ಬಳಿಕ ಕಲಸಿದ ಹಿಟ್ಟು ಎರಡಷ್ಟಾಗುತ್ತೆ. ಇದನ್ನ ಮತ್ತೊಮ್ಮೆ ನಾದಿಕೊಳ್ಳಿ.

ನಾದಿಕೊಂಡ ಈ ಹಿಟ್ಟನ್ನ ರೊಟ್ಟಿಯ ರೀತಿ ಮಾಡಿಕೊಳ್ಳಿ. ಈ ರೊಟ್ಟಿಯನ್ನ ಪಿಜ್ಜಾ ಪ್ಯಾನ್​ ಮೇಲೆ ಹಾಕಿ ಚೆನ್ನಾಗಿ ತಟ್ಟಿ. ಆಮೇಲೆ ಪೋರ್ಕ್​ ಬಳಸಿ ಈ ಪಿಜ್ಜಾ ಬೇಸ್​ಮೇಲೆ ಚಿಕ್ಕ ಚಿಕ್ಕ ರಂಧ್ರಗಳನ್ನ ಮಾಡಿ. ಇದಕ್ಕೆ ಪಿಜ್ಜಾ ಮಸಲಾ ಸವರಿ ಬಳಿಕ ಚೀಸ್​, ಕಟ್​ ಮಾಡಿದ ಈರುಳ್ಳಿ, ದೊಡ್ಡ ಮೆಣಸು, ಕರಿ ಓಲಿವ್ಸ್, ಸ್ವೀಟ್​ ಕಾರ್ನ್​, ಕೆಂಪು ಮೆಣಸಿನ ಚೂರು, ಬೇಕಾದಲ್ಲಿ ಮತ್ತೊಂದು ಬಾರಿ ಚೀಸ್​​, ಟೊಮ್ಯಾಟೋ ಎಲ್ಲವನ್ನ ಹಾಕಿ ಪಿಜ್ಜಾ ರೀತಿಯಲ್ಲಿ ಅಲಂಕರಿಸಿ. ಬಳಿಕ ಇದನ್ನ ಓವನ್​​ನಲ್ಲಿ ಕನೆಕ್ಷನ್​ ಮೋಡ್​ 450 ವ್ಯಾಟ್​ನಲ್ಲಿ 10 ರಿಂದ15 ನಿಮಿಷ ಬೇಯಿಸಿದ್ರೆ ರುಚಿಕರ ಪಿಜ್ಜಾ ಸವಿಯಲು ಸಿದ್ಧ

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...