alex Certify ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಘಟನೆ; ಹೋಟೆಲ್​​ ಆವರಣದಲ್ಲಿ ಮಹಿಳೆಯನ್ನು ಇರಿದು ಕೊಂದು ದುಷ್ಕರ್ಮಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಘಟನೆ; ಹೋಟೆಲ್​​ ಆವರಣದಲ್ಲಿ ಮಹಿಳೆಯನ್ನು ಇರಿದು ಕೊಂದು ದುಷ್ಕರ್ಮಿ ಪರಾರಿ

38 ವರ್ಷದ ಮಹಿಳೆಗೆ ವ್ಯಕ್ತಿಯೊಬ್ಬ ದೆಹಲಿ – ಗುರುಗ್ರಾಮ ರಸ್ತೆಯಲ್ಲಿರುವ ಹೋಟೆಲ್ ​ನಲ್ಲಿ ಇರಿದ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಸಚಿನ್​ ಎಂದು ಗುರುತಿಸಲಾಗಿದೆ. ಆಗಸ್ಟ್​​ 20ರಂದು ರಾತ್ರಿ 9:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆಘಾತಕಾರಿ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಶುಕ್ರವಾರ ರಾತ್ರಿ 8:15ರ ಸುಮಾರಿಗೆ ಆರೋಪಿ ಹಾಗೂ ಮಹಿಳೆ ಹೋಟೆಲ್​​ ತಲುಪಿದ್ದರು. ಸುಮಾರು 1 ಗಂಟೆ ಒಳಗಾಗಿಯೇ ಅವರಿಗೆ ಹೋಟೆಲ್​ ರೂಮ್​ ನೀಡಲಾಗಿತ್ತು. ಸುಮಾರು 15 ನಿಮಿಷಗಳ ಬಳಿಕ ಕೊಠಡಿಯಿಂದ ಆರೋಪಿ ಓಡಿ ಹೋಗಿದ್ದಾನೆ. ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಹೋಟೆಲ್​​ನ ಮೆಟ್ಟಿಲಿನ ಬಳಿ ಕುಸಿದು ಬಿದ್ದಿದ್ದಳು.

ಹೋಟೆಲ್​ ಸಿಬ್ಬಂದಿ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಪತಿಯನ್ನೂ ಸಂಪರ್ಕಿಸಲಾಗಿದೆ. ಸೆಕ್ಟರ್​ 14 ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಿಳೆಯನ್ನು ಇಮ್ರಾನಾ ಎಂದು ಗುರುತಿಸಲಾಗಿದೆ. ಈಕೆ ಉತ್ತರ ಪ್ರದೇಶದ ಆಗ್ರಾದ ನಿವಾಸಿಯಾಗಿದ್ದಳು ಎನ್ನಲಾಗಿದೆ.

ಮೃತ ಮಹಿಳೆಯ ಪತಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ವರದಿಯ ಪ್ರಕಾರ ಇಮ್ರಾನಾ ತಮ್ಮ ಪತಿ ಸ್ನೇಹಿತ ಸಚಿನ್​​ರನ್ನು ಭೇಟಿಯಾಗಲು ರಿಂಕು ಎಂಬವರ ಆಟೋರಿಕ್ಷಾದಲ್ಲಿ ಐಎಫ್​ಎಫ್​​ಓ ಚೌಕ್​​ಗೆ ತೆರಳಿದ್ದಳು ಎನ್ನಲಾಗಿದೆ.

ಇಮ್ರಾನಾಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದರಿಂದ ಆಕೆ ಮೂರೇ ನಿಮಿಷದಲ್ಲಿ ಸಾವನ್ನಪ್ಪಿದ್ದಾಳೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಹೋಟೆಲ್​ನಲ್ಲಿ ನಕಲಿ ಐಡಿ ನೀಡಿದ್ದಾನೆ ಎಂದು ತಿಳಿದುವಂದಿದೆ. ಇಲ್ಲಿಯವರೆಗೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...