alex Certify ಸಿಧು, ಮಜಿಥಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ‘ಪ್ಯಾಡ್​ ವುಮನ್​’….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಧು, ಮಜಿಥಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ‘ಪ್ಯಾಡ್​ ವುಮನ್​’….!

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್​ನ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಹಾಗೂ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್​ ಮಜಿಥಿಯಾರನ್ನು ಸೋಲಿಸಿದ ಆಮ್​ ಆದ್ಮಿ ಪಕ್ಷದ ಜೀವನ್​ ಜ್ಯೋತ್​ ಕೌರ್​ ತಮ್ಮ ಗೆಲುವನ್ನು ಕೇಜ್ರಿವಾಲ್ ದೆಹಲಿ ಮಾದರಿಯ ಮ್ಯಾಜಿಕ್​ ಎಂದು ಹೇಳಿದ್ದಾರೆ.

ಇದು ಜೀವನ್​ ಜ್ಯೋತ್​ ಕೌರ್​ಗೆ ಮೊದಲ ಚುನಾವಣೆ. ಇತ್ತ ಸಿಧು ಹಾಗೂ ಮಜಿಥಿಯಾ ಈ ಹಿಂದೆ ಎಂದೂ ಚುನಾವಣೆಯಲ್ಲಿ ಸೋತ ಇತಿಹಾಸವೇ ಇರಲಿಲ್ಲ. ಆದರೆ ಜೀವನ್​ ಜ್ಯೋತಿ ಕೌರ್​​ ಅಮೃತಸರ ಪೂರ್ವ ಕ್ಷೇತ್ರದಲ್ಲಿ ಸಿಧು ಹಾಗೂ ಮಜಿಥಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಜೀವನ್​ ಜ್ಯೋತ್ಕೌರ್​ ಅಮೃತಸರದಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರಿಂದ ಪ್ಯಾಡ್ ವುಮನ್​ ಎಂದೇ ಪ್ರಸಿದ್ಧಿಯನ್ನು ಪಡೆದ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಪಂಜಾಬ್​ನಲ್ಲಿ ಕೌರ್​ ತಮ್ಮ ಚೊಚ್ಚಲ ಚುನಾವಣೆಯನ್ನು ಗೆದ್ದಿದ್ದಾರೆ. ಪಂಜಾಬ್​ ಚುನಾವಣೆಯಲ್ಲಿ ಆಪ್​ 92 ಸೀಟುಗಳನ್ನು ಗೆದ್ದುಕೊಂಡಿದೆ. ಅಂದಹಾಗೆ ಪಂಜಾಬ್​ನಲ್ಲಿ ಯಾವುದೇ ಒಂದು ರಾಜಕೀಯ ಪಕ್ಷವು 90ಕ್ಕೂ ಅಧಿಕ ಸೀಟುಗಳನ್ನು ಗೆದ್ದಿರುವುದು ಇದೇ ಮೊದಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...