alex Certify ಸಿಂಧೂರ ಧರಿಸಿದ್ದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಾಂಗ್ಲಾ ಪೊಲೀಸ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಧೂರ ಧರಿಸಿದ್ದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಾಂಗ್ಲಾ ಪೊಲೀಸ್​​..!

ಮಹಿಳೆಯೊಬ್ಬರಿಗೆ ಸಿಂಧೂರ ಧರಿಸಿದ್ದಾರೆ ಎಂಬ ಕಾರಣಕ್ಕೆ ಬಾಂಗ್ಲಾ ಪೊಲೀಸ್​ ಪೇದೆ ಕಿರುಕುಳ ನೀಡಿರುವ ವಿಚಾರವು ವ್ಯಾಪಕ ಟೀಕೆಗೆ ಗುರಿಯಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಕೂಗು ಕೇಳಿ ಬರುತ್ತಿದೆ.

ಏಪ್ರಿಲ್​ 2ರಂದು ಢಾಕಾದ ತೇಜಗಾಂವ್​ ಕಾಲೇಜಿನಲ್ಲಿ ರಂಗಭೂಮಿ ಮತ್ತು ಮಾಧ್ಯಮ ಅಧ್ಯಯನದ ಉಪನ್ಯಾಸಕಿ ಲತಾ ಸಮದ್ದಾರ್​​ ಶೇರ್​ ಎ ಬಾಂಗ್ಲಾ ನಗರ ಪ್ರದೇಶದಲ್ಲಿ ತನಗೆ ಹಾಡಹಗಲೇ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ನಾನು ಕಾಲೇಜು ಮಾರ್ಗವಾಗಿ ತೆರಳುತ್ತಿದ್ದ ವೇಳೆಯಲ್ಲಿ, ಉದ್ದವಾದ ಗಡ್ಡವನ್ನು ಹೊಂದಿದ್ದ ಮಧ್ಯಮ ವಯಸ್ಸಿನ ಪೊಲೀಸ್​ ಪೇದೆಯು ನನ್ನ ಬಳಿ ಬಂದು ಸಿಂಧೂರ ಏಕೆ ಹಾಕಿದ್ದೀರಿ..? ಎಂದು ಪ್ರಶ್ನೆ ಮಾಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ.

ಸಿಂಧೂರ ಧರಿಸಿದ ಕಾರಣಕ್ಕೆ ಮಹಿಳೆಯರಿಗೆ ಕಿರುಕುಳ ನೀಡಿದ ಕಾರಣಕ್ಕೆ ಪೊಲೀಸ್​ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಲ್ಲೆಡೆ ಕೂಗು ಕೇಳಿ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...