alex Certify ಸಾಲವಾಗಿ ಕೊಟ್ಟಿದ್ದ ಹಣ ವಾಪಸ್ ಸಿಗುತ್ತಿಲ್ಲವೇ….? ವಿಶ್ವಾಸಘಾತುಕರಿಗೆ ಬುದ್ಧಿ ಕಲಿಸಲು ಈ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲವಾಗಿ ಕೊಟ್ಟಿದ್ದ ಹಣ ವಾಪಸ್ ಸಿಗುತ್ತಿಲ್ಲವೇ….? ವಿಶ್ವಾಸಘಾತುಕರಿಗೆ ಬುದ್ಧಿ ಕಲಿಸಲು ಈ ಕೆಲಸ ಮಾಡಿ

ಭಾರತದಲ್ಲಿ ಸಾಲ ಪಡೆಯುವವರು ಮತ್ತು ಸಾಲ ನೀಡುವವರ ಕೊರತೆ ಇಲ್ಲ. ಕೆಲವರು ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಉತ್ಸಾಹದಲ್ಲಿ ಹಣವನ್ನು ನೀಡಿದರೆ, ಇನ್ನು ಕೆಲವರು ನಂಬಿಕೆಯಿಂದ ಸಾಲ ನೀಡುತ್ತಾರೆ. ಆದರೆ ಪಡೆದ ಹಣವನ್ನು ವಾಪಸ್‌ ಕೊಡದೇ ಸತಾಯಿಸುವವರೇ ಹೆಚ್ಚು. ಸಾಲವಾಗಿ ಪಡೆದ ಹಣವನ್ನು ನೀಡಲು ಅನೇಕರು ನಿರಾಕರಿಸುತ್ತಾರೆ. ಇದರಿಂದಾಗಿ ಸಾಲ ಕೊಟ್ಟವರು ಸಾಲಗಾರನಿಗಿಂತ ಹೆಚ್ಚು ಅವಮಾನವನ್ನು ಅನುಭವಿಸುತ್ತಾರೆ.

ಹಲವು ಬಾರಿ ಪ್ರಯತ್ನಿಸಿದರೂ ಹಣವನ್ನು ಮರಳಿ ಕೊಡದೇ ಇದ್ದಾಗ ಅದನ್ನು ಮರೆತು ಬಿಡಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಹಣ ಸಂಪಾದಿಸುವುದು ಬಹಳ ಕಷ್ಟದ ಕೆಲಸ. ಹಗಲು ರಾತ್ರಿ ದುಡಿಯಬೇಕು. ಮೇಲಧಿಕಾರಿಯಿಂದ ಬೈಗುಳ ತಿನ್ನಬೇಕು. ರಕ್ತ ಮತ್ತು ಬೆವರು ಬಸಿದು ದುಡಿದ ಹಣ ಸಾಲಗಾರರ ಪಾಲಾದಾಗ ಅದು ತುಂಬಾ ನೋವುಂಟುಮಾಡುತ್ತದೆ.

ಸುಪ್ರೀಂ ಕೋರ್ಟ್ ವಕೀಲರೊಬ್ಬರು ಈ ಕಠಿಣ ಪರಿಸ್ಥಿತಿಯಿಂದ ಪಾರಾಗಲು ಕಾನೂನು ಮಾರ್ಗವನ್ನು ಹುಡುಕಿದ್ದಾರೆ. ವಕೀಲ ನಿತೀಶ್ ಬಂಕಾ ಅವರು ತಮ್ಮ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಇದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯಾರಾದರೂ ಸಾಲ ಪಡೆದು ಹಿಂತಿರುಗಿಸದಿದ್ದರೆ, ಮೊದಲು ನೀವು ಅವರಿಗೆ ಲೀಗಲ್ ನೋಟಿಸ್ ಕಳುಹಿಸಬೇಕು. ಲೀಗಲ್ ನೋಟಿಸ್ ನೀಡಿದ ನಂತರವೂ ಅವರು ನಿಮ್ಮ ಹಣವನ್ನು ಹಿಂತಿರುಗಿಸದಿದ್ದರೆ, ನೀವು ಸಿವಿಲ್ ಪ್ರಕರಣವನ್ನು ದಾಖಲಿಸಬೇಕಾಗುತ್ತದೆ.

ಶೀಘ್ರದಲ್ಲೇ ಹಣವನ್ನು ಪಡೆಯುವುದು ಹೇಗೆ ?

ಸಿವಿಲ್ ಪ್ರಕರಣವು ‘ಸಮರಿ ರಿಕವರಿ ಸೂಟ್’ ಆಗಿರುತ್ತದೆ, ಅದನ್ನು ನೀವು ಸಲ್ಲಿಸಬೇಕು. ಎರವಲು ಪಡೆದ ಹಣವನ್ನು ಸಾಧ್ಯವಾದಷ್ಟು ಬೇಗ ಮರುಪಡೆಯಲು ನ್ಯಾಯಾಲಯವು ಸಹಾಯ ಮಾಡುತ್ತದೆ. ಆದರೆ ಸಾಮಾನ್ಯ ಪ್ರಕರಣ ದಾಖಲಿಸಿದ್ರೆ ಹಣ ವಾಪಸ್‌ ಸಿಗಲು ವರ್ಷಗಳೇ ಬೇಕಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...