alex Certify ಸಾಕು ನಾಯಿಯ ಜನ್ಮ ದಿನವನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ ಹಾಸ್ಯ ನಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ನಾಯಿಯ ಜನ್ಮ ದಿನವನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ ಹಾಸ್ಯ ನಟ..!

ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ತಮ್ಮ ಮನೆಯ ಮಕ್ಕಳಂತೆಯೇ ಹಲವರು ಆಚರಿಸುತ್ತಾರೆ. ಮಕ್ಕಳ ಹುಟ್ಟುಹಬ್ಬದ ಸಂತೋಷಕೂಟ ಆಚರಿಸಲು ಬಂಧುಮಿತ್ರರು, ಸ್ನೇಹಿತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಹಾಗೆಯೇ ಶ್ವಾನಗಳ ಹುಟ್ಟುಹಬ್ಬವನ್ನೂ ಕೆಲವರು ಆಚರಿಸುತ್ತಾರೆ. ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಾರೆ. ಆದ್ರೆ ಹಾಸ್ಯನಟ ತನ್ಮಯ್ ಭಟ್ ಸ್ವಲ್ಪ ಡಿಫರೆಂಟ್ ಆಗಿ ತಮ್ಮ ಮುದ್ದಿನ ಶ್ವಾನದ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

ಹೌದು, ತನ್ಮಯ್ ಭಟ್ ಅವರು ತಮ್ಮ ನಾಯಿಯ ಎರಡನೇ ಹುಟ್ಟುಹಬ್ಬಕ್ಕೆ ರಾಜಕಾರಣಿಗಳು ಚುನಾವಣೆಗೆ ಹಾಕುವ ಪೋಸ್ಟರ್ ನಂತೆ ಶ್ವಾನದ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಾಕಲಾಗಿದೆ. ಈ ಮೂಲಕ ಹುಟ್ಟುಹಬ್ಬದ ಆಚರಣೆಗಳಿಗೆ ಟ್ವಿಸ್ಟ್ ನೀಡಿದ್ದಾರೆ. ಚಾಟ್ 2ನೇ ವರ್ಷಕ್ಕೆ ಕಾಲಿಟ್ಟಿದೆ ಎನ್ನುವ ಶೀರ್ಷಿಕೆಯನ್ನು ನೀಡುತ್ತಾ ಇದರ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತನ್ಮಯ್ ತನ್ನ ಮೂವರು ಸ್ನೇಹಿತರು ಮತ್ತು ನಾಯಿಯೊಂದಿಗೆ ಪೋಸ್ಟರ್‌ನ ಮುಂದೆ ಕುಳಿತು ಫೋಟೋಗೆ ಪೋಸ್ ನೀಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ ನಂತರ ಈ ಪೋಸ್ಟ್ ಇಪ್ಪತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಗಳಿಸಿದೆ. ಹಾಸ್ಯನಟ ತನ್ಮಯ್ ಅವರ ಅತ್ಯಂತ ಸೃಜನಶೀಲ ಕಲ್ಪನೆಗಾಗಿ ಹಲವಾರು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...