alex Certify ಸರಳ ಮತ್ತು ವೇಗದ ಕಂಪ್ಯೂಟಿಂಗ್ ಅನುಭವವಕ್ಕಾಗಿ Chrome OS ಲ್ಯಾಪ್‌ಟಾಪ್‌ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರಳ ಮತ್ತು ವೇಗದ ಕಂಪ್ಯೂಟಿಂಗ್ ಅನುಭವವಕ್ಕಾಗಿ Chrome OS ಲ್ಯಾಪ್‌ಟಾಪ್‌ಗಳು

ಲ್ಯಾಪ್‌ಟಾಪ್ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ಮೊಬೈಲ್‌ ನಂತೆ ಲ್ಯಾಪ್ಟಾಪ್‌ ಕೂಡ ದೈನಂದಿನ ಅಗತ್ಯವಾಗಿ ಮಾರ್ಪಟ್ಟಿದೆ. ಲ್ಯಾಪ್ಟಾಪ್‌ ಖರೀದಿ ಮಾಡುವಾಗ ಬೆಲೆ, ಗಾತ್ರ ಮತ್ತು ತೂಕ ಇವನ್ನೆಲ್ಲ ಪರಿಗಣಿಸಲೇಬೇಕು. ಎಲ್ಲಕ್ಕಿಂತ ಮುಖ್ಯವೆಂದರೆ ಅದರಲ್ಲಿರುವ ತಾಂತ್ರಿಕ ವೈಶಿಷ್ಟ್ಯ. ಲ್ಯಾಪ್‌ಟಾಪ್ ಕಾರ್ಯನಿರ್ವಹಿಸುವ ಆಪರೇಟಿಂಗ್ ಸಿಸ್ಟಮ್ (OS) ಯಾವುದು ಅನ್ನೋದನ್ನು ಎಲ್ಲರೂ ಮೊದಲು ಗಮನಿಸ್ತಾರೆ.

ಕೆಲವು ಲ್ಯಾಪ್‌ಟಾಪ್‌ಗಳು ಮೊದಲೇ ಲೋಡ್ ಮಾಡಲಾದ ಸಾಫ್ಟ್‌ವೇರ್‌ನೊಂದಿಗೆ ಬರುತ್ತವೆ ಅಥವಾ ನಿರ್ದಿಷ್ಟ OS ನಲ್ಲಿ ರನ್ ಆಗುತ್ತವೆ. ನೀವೇನಾದ್ರೂ ಹೊಸ ಲ್ಯಾಪ್ಟಾಪ್‌ ಕೊಂಡುಕೊಳ್ಳುವ ಯೋಚನೆಯಲ್ಲಿದ್ರೆ Chrome OS ಲ್ಯಾಪ್‌ಟಾಪ್‌ಗಳು ಬೆಸ್ಟ್.‌ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ ಮತ್ತು ಕಂಪ್ಯೂಟರ್‌ಗಳಂತಹ ಸಾಧನವನ್ನು ನಿರ್ವಹಿಸಲು ಆಪರೇಟಿಂಗ್ ಸಿಸ್ಟಮ್ ಅಗತ್ಯವಿದೆ. ನಿಮಗೆ ಕಂಪ್ಯೂಟರ್‌ಗಳ ಬಗ್ಗೆ ತುಂಬಾ ಕಡಿಮೆ ತಿಳಿದಿದ್ದರೂ ಸಹ, ನೀವು ವಿಂಡೋಸ್ ಓಎಸ್ ಬಗ್ಗೆ ಕೇಳಿರಬಹುದು. ಇದು ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಆಪರೇಟಿಂಗ್ ಸಿಸ್ಟಮ್.

ಆದಾಗ್ಯೂ, Chrome ಆಪರೇಟಿಂಗ್ ಸಿಸ್ಟಮ್‌ನಂತಹ ಇತರ ಆಯ್ಕೆಗಳಿವೆ. ಅಂತಹ ಆಪರೇಟಿಂಗ್ ಸಿಸ್ಟಮ್ ಅನ್ನೇ ಯಾಕೆ ಬಳಸಬೇಕು ಅನ್ನೋ ಪ್ರಶ್ನೆ ಮೂಡುವುದು ಸಹಜ. ವಿಂಡೋಸ್ ಅಥವಾ ಮ್ಯಾಕ್ ಓಎಸ್ ಆಧಾರಿತ ಲ್ಯಾಪ್‌ಟಾಪ್‌ಗಳಿಗೆ ಹೋಲಿಸಿದರೆ ಇವು ಬಳಸಲು ಸುಲಭ ಮತ್ತು ತುಲನಾತ್ಮಕವಾಗಿ ಅಗ್ಗವಾಗಿವೆ.  ಕ್ರೋಮ್ ಓಎಸ್-ಆಧಾರಿತ ಲ್ಯಾಪ್‌ಟಾಪ್‌ಗಳ ಪಟ್ಟಿ ಇಲ್ಲಿದೆ. ಇವುಗಳಲ್ಲಿ ನಿಮಗೆ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.

HP Chromebook 14 Intel Celeron N4020

1) ಪ್ರೊಸೆಸರ್‌ : Intel Celeron N4020 (1.1 GHz ಬೇಸ್‌ ಫ್ರೀಕ್ವೆನ್ಸಿ , 2.8 GHzವರೆಗೂ ಬರ್ಸ್ಟ್‌ ಫ್ರೀಕ್ವೆನ್ಸಿ, 4 MB L2 ಕ್ಯಾಚೆ, , 2 ಕೋರ್ಸ್‌)

2) ಸ್ಕ್ರೀನ್‌ ಸೈಜ್‌ : 14 ಇಂಚು

3) ರೆಸಲ್ಯೂಶನ್‌ ‎1366 x 768 (HD ready)

4) RAM: 4 GB

5) ಹಾರ್ಡ್‌ ಡ್ರೈವ್‌ : ‎64 GB

6) ಸರಾಸರಿ ಬ್ಯಾಟರಿ ಲೈಫ್‌ : ‎12 ಗಂಟೆಗಳು

 Lenovo IdeaPad 3 Chromebook Intel Celeron N4020 14” FHD Laptop

1) ಪ್ರೊಸೆಸರ್‌ : Intel Celeron N4020 | ವೇಗ : 1.1 GHz (base) – 2.8 GHz (max) | 2 ಕೋರ್ಸ್‌ | 4MB ಕ್ಯಾಚೆ

2) ಸ್ಕ್ರೀನ್‌ ಗಾತ್ರ : 14 ಇಂಚು

3) RAM: 4 GB

4) ಹಾರ್ಡ್‌ ಡ್ರೈವ್‌ : ‎64 GB

5) ರೆಸಲ್ಯೂಶನ್‌ : ‎1920 x 1080 pixels

6) ಸರಾಸರಿ ಬ್ಯಾಟರಿ ಲೈಫ್‌ : ‎10 ಗಂಟೆಗಳು

 ASUS Chromebook Celeron Dual Core – (4 GB/64 GB EMMC

Storage/Chrome OS) C523NA-BR0300 Thin and Light Laptop

1) ಪ್ರೊಸೆಸರ್‌ : Intel Celeron Dual Core N3350 (1.1 GHz with Turbo Boost Upto 2.4 GHz)

2) ಸ್ಕ್ರೀನ್‌ ಗಾತ್ರ : 39.62 ಸೆಮೀ

3) RAM: 4 GB

4) ಹಾರ್ಡ್ ಡ್ರೈವ್‌ : ‎64 GB

5) ರೆಸಲ್ಯೂಶನ್‌ ಎಚ್‌ ಡಿ : 1366 X 768 ಪಿಕ್ಸೆಲ್ಸ್‌

6) ಸರಾಸರಿ ಬ್ಯಾಟರಿ ಲೈಫ್‌ : ‎6 ಗಂಟೆಗಳು

Acer Chromebook 315

1) ಪ್ರೊಸೆಸರ್‌ : Intel Celeron N4000

2) ಸ್ಕ್ರೀನ್‌ ಗಾತ್ರ : 15.6 inches

3) ರೆಸಲ್ಯೂಶನ್‌ : ‎1920 x 1080 pixels

4) RAM: 4 GB

5) ಹಾರ್ಡ್‌ ಡ್ರೈವ್‌ ಗಾತ್ರ : ‎32 GB

6) ಸರಾಸರಿ ಬ್ಯಾಟರಿ ಲೈಫ್‌ : ‎5 ಗಂಟೆಗಳು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...