alex Certify ಸಮತೋಲನ ಕಳೆದುಕೊಂಡು ಚಲಿಸುತ್ತಿದ್ದ ರೈಲಿನಡಿ ಬಿದ್ದ ಮಹಿಳೆ; ಆಘಾತಕಾರಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮತೋಲನ ಕಳೆದುಕೊಂಡು ಚಲಿಸುತ್ತಿದ್ದ ರೈಲಿನಡಿ ಬಿದ್ದ ಮಹಿಳೆ; ಆಘಾತಕಾರಿ ವಿಡಿಯೋ ವೈರಲ್

ಮಹಿಳೆಯೊಬ್ಬರು ಮೂರ್ಛೆ ತಪ್ಪಿ ಚಲಿಸುತ್ತಿರುವ ರೈಲಿನಡಿಗೆ ಬಿದ್ದಿರುವ ಆಘಾತಕಾರಿ ಘಟನೆ ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ನಡೆದಿದೆ.

ಫ್ಲಾಟ್‍ಫಾರ್ಮ್ ನಲ್ಲಿ ನಿಂತಿದ್ದ ಮಹಿಳೆಯೊಬ್ಬರಿಗೆ ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿದೆ. ಈ ವೇಳೆ ಬರುತ್ತಿದ್ದ ರೈಲಿನಡಿಗೆ ಬಿದ್ದುಬಿಟ್ಟಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರೈಲನ್ನು ನಿಲ್ಲಿಸಲಾಗಿದೆ. ರೈಲು ಹಳಿಗಳಿಂದ ಆಕೆಯನ್ನು ಮೇಲೆತ್ತಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿನ ಮಹಿಳೆಯನ್ನು ಕ್ಯಾಂಡೆಲಾ ಎಂದು ಗುರುತಿಸಲಾಗಿದೆ. ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಮಹಿಳೆ ತನ್ನ ಸ್ವಾಧೀನ ಕಳೆದುಕೊಂಡು ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದಿದ್ದಾಳೆ. ಇದನ್ನು ನೋಡಿದ ಅಲ್ಲಿಯೇ ಇದ್ದ ಇತರೆ ಪ್ರಯಾಣಿಕರು ಆಘಾತಗೊಂಡಿದ್ದಾರೆ.

ಅದೃಷ್ಟವಶಾತ್, ಕ್ಯಾಂಡೆಲಾ ಅವರನ್ನು ಜೀವಂತವಾಗಿ ಟ್ರ್ಯಾಕ್‌ಗಳಿಂದ ರಕ್ಷಿಸಲಾಯಿತು. ನಂತರ ಆಕೆಯನ್ನು ಗಾಲಿಕುರ್ಚಿಯಲ್ಲಿ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಇದೀಗ ಆಕೆ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ. ತಾನು ಇನ್ನೂ ಹೇಗೆ ಜೀವಂತವಾಗಿದ್ದೇನೆ ಎಂಬುದು ತಿಳಿದಿಲ್ಲ. ತಾನು ಇನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಅಂತಾ ಹೇಳಿದ್ದಾರೆ.

ಘಟನೆಯನ್ನು ವೀಕ್ಷಿಸಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಪರಿಸ್ಥಿತಿಯನ್ನು ಪವಾಡ ಎಂದು ವಿವರಿಸಿದ್ದಾರೆ. ಮಹಿಳೆ ನಿಜಕ್ಕೂ ಮರುಜನ್ಮ ಪಡೆದಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

This woman apparently fainted and she fell under on an oncoming train, BUT SHE SURVIVED! She's now out of the hospital 🙏 pic.twitter.com/EQA2V4foh9

— Diamond Lou®™ 🔞 (@DiamondLouX) April 19, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...