alex Certify ಸುಲಭವಾಗಿ ಮಾಡಬಹುದು ರುಚಿಕರ ‘ಸಬ್ಬಸಿಗೆ ಸೊಪ್ಪಿನ ದಾಲ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಬಹುದು ರುಚಿಕರ ‘ಸಬ್ಬಸಿಗೆ ಸೊಪ್ಪಿನ ದಾಲ್’

ಸೊಪ್ಪು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸುಲಭವಾಗಿ ಮಾಡಬಹುದಾದ ಸಬ್ಬಸಿಗೆ ಸೊಪ್ಪಿಗೆ ದಾಲ್ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು :

2 ಕಟ್ಟು ಸಬ್ಬಸಿಗೆ ಸೊಪ್ಪು , 1/2 ಕಪ್ ಹೆಸರು ಬೇಳೆ, 3- 4 ಹಸಿಮೆಣಸಿನಕಾಯಿ, 1/2 ಸ್ಪೂನ್ ಜೀರಿಗೆ , 1/2 ಸ್ಪೂನ್ ಧನಿಯಾ, 1 ಕಪ್ ತೆಂಗಿನಕಾಯಿ ತುರಿ, 1 ಸ್ಪೂನ್ ಸಾಸಿವೆ, ಇಂಗು, ಕರಿಬೇವು ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ :

ಸಬ್ಬಸಿಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ ಕುಕ್ಕರಿಗೆ ಹಾಕಿ ಅದಕ್ಕೆ ಹೆಸರುಬೇಳೆ, ಹಸಿಮೆಣಸು ಹಾಕಿ 1 ಕಪ್ ನೀರು ಹಾಕಿ ಕುಕ್ಕರಿನಲ್ಲಿ 2 ವಿಷಲ್ ಕೂಗಿಸಿಕೊಳ್ಳಿ. ಬೆಂದ ಬೇಳೆಗೆ ಸ್ವಲ್ಪ ಅರಶಿನ, ಉಪ್ಪು, ತೆಂಗಿನಕಾಯಿ ತುರಿ, ಜೀರಿಗೆ, ಧನಿಯಾ ಸೇರಿಸಿ ರುಬ್ಬಿಕೊಲಳ್ಳಿ, ರುಬ್ಬಿದ ಮಸಾಲೆ ಹಾಕಿ ಕುದಿಸಿ. ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿದ ಮೇಲೆ ಅದಕ್ಕೆ ಇಂಗು, ಕರಿಬೇವು ಹಾಕಿ ಈ ಒಗ್ಗರಣೆಯನ್ನು ದಾಲ್ ಕುಕ್ಕರಿನ ಮಿಶ್ರಣಕ್ಕೆ ಹಾಕಿದರೆ ರುಚಿಕರವಾದ ಸಬ್ಬಸಿಗೆ ಸೊಪ್ಪಿನ ದಾಲ್ ಸವಿಯಲು ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...