alex Certify ಸಣ್ಣ ವ್ಯಾಪಾರಿಗಳನ್ನು ಬೆಂಬಲಿಸಲು ಕರೆ ನೀಡಿದ ಐಎಎಸ್ ಅಧಿಕಾರಿ; ವಿಡಿಯೋ ಹಂಚಿಕೊಂಡ ಸಾಹು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ವ್ಯಾಪಾರಿಗಳನ್ನು ಬೆಂಬಲಿಸಲು ಕರೆ ನೀಡಿದ ಐಎಎಸ್ ಅಧಿಕಾರಿ; ವಿಡಿಯೋ ಹಂಚಿಕೊಂಡ ಸಾಹು

ನೀವು ಸಣ್ಣ ವ್ಯಾಪಾರವನ್ನು ಬೆಂಬಲಿಸಿದಾಗ, ನೀವು ನಿಮ್ಮ ಕನಸನ್ನು ಸಾಕಾರಗೊಳಿಸುತ್ತೀರಿ ಎಂದು ಅರ್ಥ. ದೊಡ್ಡ-ದೊಡ್ಡ ಸಂಸ್ಥೆಗಳು ನಿಧಾನವಾಗಿ ಎಲ್ಲಾ ರೀತಿಯ ವ್ಯವಹಾರಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಈ ಜಗತ್ತಿನಲ್ಲಿ, ಸಮುದಾಯ ಅಥವಾ ಕುಟುಂಬ ಚಾಲಿತ ಉದ್ಯಮಕ್ಕೂ ಅದರದ್ದೇ ಆದ ಮಹತ್ವವಿದೆ.

ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಗುಂಪೊಂದು ತಡರಾತ್ರಿಯಲ್ಲಿ ತಮ್ಮ ಅಂಗಡಿಯಲ್ಲಿ ಕಲ್ಲಂಗಡಿ ಹಣ್ಣನ್ನು ಇಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

13 ಸೆಕೆಂಡುಗಳ ವಿಡಿಯೋದಲ್ಲಿ, ಮೂವರು ವಯಸ್ಕರು ಮತ್ತು ಇಬ್ಬರು ಮಕ್ಕಳ ಗುಂಪು ಟ್ರಕ್‌ನಿಂದ ಕಲ್ಲಂಗಡಿ ಹಣ್ಣುಗಳನ್ನು ತಮ್ಮ ರಸ್ತೆಬದಿಯ ಅಂಗಡಿಗೆ ರವಾನಿಸಿದ್ದಾರೆ. ಒಬ್ಬರಿಂದ ಒಬ್ಬರಿಗೆ ಹಣ್ಣನ್ನು ರವಾನಿಸುವ ಮೂಲಕ ಕಲ್ಲಂಗಡಿ ಹಣ್ಣನ್ನು ತಮ್ಮ ಅಂಗಡಿಯಲ್ಲಿ ಇಟ್ಟಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡ ಐಎಎಸ್ ಅಧಿಕಾರಿ ಸಾಹು, ಈ ಇಡೀ ಕುಟುಂಬವು ರಾತ್ರಿ ತಮ್ಮ ಕಲ್ಲಂಗಡಿ ಹಣ್ಣನ್ನು ಅಂಗಡಿಯಲ್ಲಿ ಇಡುತ್ತಿರುವ ದೃಶ್ಯವನ್ನು ನೋಡಿದೆ. ಸಣ್ಣ ಮಾರಾಟಗಾರರು ಮತ್ತು ವ್ಯಾಪಾರಸ್ಥರು ತಮ್ಮ ಜೀವನೋಪಾಯವನ್ನು ಗಳಿಸಲು ಶ್ರಮಿಸುತ್ತಿರುವುದನ್ನು ನೋಡಲು ಯಾವಾಗಲೂ ವಿನೀತರಾಗುತ್ತಾರೆ. ಇಂತವರ ಬಳಿ ಎಂದಿಗೂ ಚೌಕಾಶಿ ಮಾಡಬೇಡಿ. ಅವರಿಗೆ ನೀಡಬೇಕಾದ ಬೆಂಬಲವನ್ನು ನೀಡಿ ಎಂದು ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

— Supriya Sahu IAS (@supriyasahuias) April 16, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...