alex Certify ಸಕ್ಕರೆ ಕಾಯಿಲೆಯಿಂದ ಕಿಡ್ನಿ ಸಮಸ್ಯೆಯಾಗುತ್ತದೆಯೇ ? ಡಾ. ರಾಜು ನೀಡಿದ್ದಾರೆ ಮಹತ್ವದ ‘ಆರೋಗ್ಯ’ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಕಾಯಿಲೆಯಿಂದ ಕಿಡ್ನಿ ಸಮಸ್ಯೆಯಾಗುತ್ತದೆಯೇ ? ಡಾ. ರಾಜು ನೀಡಿದ್ದಾರೆ ಮಹತ್ವದ ‘ಆರೋಗ್ಯ’ ಸಲಹೆ

ಬೆಂಗಳೂರು: ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಇದ್ದವರಿಗೆ ಕಿಡ್ನಿ ಸಮಸ್ಯೆಯಾಗುತ್ತದೆ. ಅಂತವರು ಕಿಡ್ನಿ ಚಕಪ್ ಮಾಡಿಸುತ್ತಿರಬೇಕು ಎಂಬ ಮಾತನ್ನು ಹಲವರು ಹೇಳುತ್ತಾರೆ. ನಿಜಕ್ಕೂ ಇದು ಸತ್ಯವೇ ? ಶುಗರ್ ಜಾಸ್ತಿಯಾದರೆ ಕಿಡ್ನಿ ಡ್ಯಾಮೇಜ್ ಆಗುತ್ತಾ ? ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರಿಗೆ ಕಿಡ್ನಿ ಸಮಸ್ಯೆ ಅಥವಾ ಕಿಡ್ನಿ ಡ್ಯಾಮೇಜ್ ಆಗುತ್ತದೆಯೇ? ಸಕ್ಕರೆ ಕಾಯಿಲೆ ಇರುವವರು ಏನು ಮಾಡಬೇಕು ಎಂಬ ಬಗ್ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ ಡಾ. ರಾಜು ಕೃಷ್ಣಮೂರ್ತಿ.

ಡಯಾಬಿಟಿಸ್ ಅಂದರೆ ರಕ್ತದಲ್ಲಿ ಗ್ಲೂಕೋಸ್ ಅಂಶ ಹೆಚ್ಚಾಗುವುದು. ನಮ್ಮ ದೇಹದ ಪ್ರತಿ ಜೀವಕಣ ಅಥವಾ ಪ್ರತಿ ಸೆಲ್ಸ್ ಗೂ ಗ್ಲೂಕೋಸ್ ಅಗತ್ಯ.
ನಮ್ಮ ರಕ್ತದಲ್ಲಿ ಗ್ಲೂಕೋಸ್ ಮಾತ್ರವಲ್ಲ ಯಾವುದೇ ಅಂಶ ಹೆಚ್ಚು ಅಥವಾ ಕಡಿಮೆಯಾದರೆ ಅದು ನಮ್ಮ ದೇಹದ ಸೆಲ್ಸ್ ಮೇಲೆ ಪರಿಣಾಮ ಬೀರುತ್ತದೆ. ಗ್ಲೂಕೋಸ್, ಪ್ರೋಟಿನ್, ಮಿನರಲ್ಸ್, ಫ್ಯಾಟ್ ಯಾವುದೇ ಅಂಶ ವ್ಯತ್ಯಾಸವಾದರೂ ಅದು ನಮ್ಮ ದೇಹದ ಪ್ರತಿ ಸೆಲ್ಸ್ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಗ್ಲೂಕೋಸ್ ಲೆವಲ್ ರಕ್ತದಲ್ಲಿ ಹೆಚ್ಚಾದರೆ ಅದು ನಮ್ಮ ದೇಹದ ಜೀವಕಣಗಳು ಹಾಗೂ ನಮ್ಮ ದೇಹದ ಪ್ರತಿ ಅಂಗಾಗದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದಿರಬೇಕು.

10-20 ವರ್ಷಗಳಿಂದ ಶುಗರ್ ಇರುವವರು ಔಷಧಿಯಿಲ್ಲದೇ ಶುಗರ್ ನಿಯಂತ್ರಣದಲ್ಲಿರುವುದಿಲ್ಲ. ಹೊಸದಾಗಿ ಸಕ್ಕರೆ ಕಾಯಿಲೆ ಇದೆ ಎಂಬುದು ಗೊತ್ತಾದವರು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಕಿಡ್ನಿ ಚಕಪ್ ಗೆ ಹೋಗುವ ಅಗತ್ಯವಿಲ್ಲ. ನೀವು ಸೇವಿಸುವ ಆಹಾರದ ಮೂಲಕ ಹಾಗೂ ಜೀವನಶೈಲಿ ಮೂಲಕವೇ ನಿಮ್ಮ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು ಎಂಬುದನ್ನು ಡಾ. ರಾಜು ತಿಳಿಸಿದ್ದಾರೆ.

ದೀರ್ಘ ಕಾಲದ ಮಾತ್ರೆಗಳ ಸೇವನೆ, ಲೈಫ್ ಸ್ಟೈಲ್ ಕೂಡ ಆರೋಗ್ಯ ಸಮಸ್ಯೆ, ಕಿಡ್ನಿ ಸಮಸ್ಯೆಯನ್ನು ಉಂಟುಮಾಡಬಹುದು. ಹಾಗಾಗಿ ನಿಯಮಿತವಾದ ಆಹಾರ, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದು ಮಧುಮೇಹ, ಕಿಡ್ನಿ ಸಮಸ್ಯೆ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಯಿಂದ ದೂರವಾಗಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಇದ್ದರೂ ಭಯ ಪಡುವ ಅಗತ್ಯವಿಲ್ಲ ಎಂದಿರುವ ಡಾ.ರಾಜು ಅವರ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...