alex Certify ಸಂಬಂಧ ಗಟ್ಟಿಯಾಗಿರಲು ಜೀವನ ಸಂಗಾತಿಗೆ ನೀವು ಮಾಡಬೇಕಾದ ಪ್ರಾಮಿಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧ ಗಟ್ಟಿಯಾಗಿರಲು ಜೀವನ ಸಂಗಾತಿಗೆ ನೀವು ಮಾಡಬೇಕಾದ ಪ್ರಾಮಿಸ್‌

ಪ್ರತಿಯೊಂದು ಸಂಬಂಧದಲ್ಲೂ ಪ್ರೀತಿ ಮತ್ತು ನಂಬಿಕೆ ಬಹಳ ಮುಖ್ಯ. ಇದರ ಜೊತೆಗೆ ಕೆಲವೊಂದು ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಕಾಳಜಿ ವಹಿಸಿದ್ರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವುದೇ ಇಲ್ಲ. ಸಂಬಂಧವು ಗಟ್ಟಿಯಾಗಿರಲು ನೀವು ಮಾಡಬೇಕಾದ ನಾಲ್ಕು ಕೆಲಸಗಳೇನು ಅನ್ನೋದನ್ನು ನೋಡೋಣ.

1. ಪರಸ್ಪರರ ಆದ್ಯತೆಗಳನ್ನು ಅರಿತುಕೊಳ್ಳಿ. ನಾವು ಒಬ್ಬಂಟಿಯಾಗಿರುವಾಗ ನಮ್ಮ ಬಗ್ಗೆ ಮಾತ್ರ ಯೋಚಿಸುತ್ತೇವೆ, ಹೆಚ್ಚು ಗಮನ ಕೊಡುತ್ತೇವೆ. ಮದುವೆ ಅಥವಾ ರಿಲೇಷನ್ಷಿಪ್‌ನಲ್ಲಿದ್ದಾಗ ನಮ್ಮ ಸಂಗಾತಿಯ ಆದ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಜೀವನ ಸಂಗಾತಿಯನ್ನು ಸಂತೋಷಪಡಿಸಲು ಸಿಗುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ. ನಿಮ್ಮ ಸಂಗಾತಿಗೆ ಇಷ್ಟವಿಲ್ಲದ ಅಭ್ಯಾಸಗಳನ್ನು ಬಿಟ್ಟುಬಿಡುವುದು ಉತ್ತಮ.

2. ಇಬ್ಬರೂ ಸಂತೋಷದಿಂದಿರಬೇಕೆಂದರೆ ಪರಸ್ಪರರನ್ನು ಬೆಂಬಲಿಸಬೇಕು. ನಿಮ್ಮ ಸಂಬಂಧಕ್ಕೆ ನಿಜವಾದ ಪರೀಕ್ಷೆ ಎದುರಾಗುವುದು ಕಷ್ಟದ ಸಮಯದಲ್ಲಿ. ಸಂತೋಷ ಮತ್ತು ದುಃಖ ಎರಡೂ ಭಾವನೆಗಳನ್ನು ಸಮನಾಗಿ ಹಂಚಿಕೊಳ್ಳುತ್ತೇನೆಂದು ನಿಮ್ಮ ಸಂಗಾತಿಗೆ ಭರವಸೆ ನೀಡಿ. ನೋವಿನ ಸಮಯದಲ್ಲಿ ನೀವು ನೀಡುವ ಬೆಂಬಲ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.

3. ನಿಮ್ಮ ಹೆತ್ತವರು, ಒಡಹುಟ್ಟಿದವರು ಮತ್ತು ಸ್ನೇಹಿತರ ಜೊತೆಗೆ ನೀವು ಪ್ರಾಮಾಣಿಕವಾಗಿರುವಂತೆ, ನಿಮ್ಮ ಸಂಗಾತಿಯ ಬಗೆಗೂ ಅದೇ ರೀತಿ ಮನೋಭಾವ ಇಟ್ಟುಕೊಳ್ಳಿ. ಪ್ರಾಮಾಣಿಕತೆಯ ಕೊರತೆಯಿಂದ ನಂಬಿಕೆಗೆ ಕೊಳ್ಳಿ ಇಟ್ಟಂತಾಗಬಹುದು. ಇದರಿಂದ ಸಂಬಂಧಗಳು ಹಳಸಲು ಹೆಚ್ಚು ಸಮಯ ಬೇಕಾಗುವುದಿಲ್ಲ.

4. ಜೀವನ ಪೂರ್ತಿ ಸಂದರ್ಭಗಳು ಒಂದೇ ತೆರನಾಗಿರುವುದಿಲ್ಲ. ಸಂಬಂಧಗಳು ಮುರಿದು ಬೀಳಬಹುದೆಂಬ ಭಯ ಇದ್ದೇ ಇರುತ್ತದೆ. ಆದರೆ ಸದಾಕಾಲ ಸಂಗಾತಿಯ ಜೊತೆಗಿರುತ್ತೇನೆಂದು ಭರವಸೆ ನೀಡಿ. ಹೀಗೆ ಮಾಡುವುದರಿಂದ ನಂಬಿಕೆ ಹೆಚ್ಚಾಗುತ್ತದೆ. ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...