alex Certify ಸಂಬಂಧ ಗಟ್ಟಿಯಾಗಿರಬೇಕೆ…..? ಇಲ್ಲಿವೆ ಪ್ರೀತಿ ಉಳಿಸಿಕೊಳ್ಳಲು ಸುಲಭ ಮಾರ್ಗಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧ ಗಟ್ಟಿಯಾಗಿರಬೇಕೆ…..? ಇಲ್ಲಿವೆ ಪ್ರೀತಿ ಉಳಿಸಿಕೊಳ್ಳಲು ಸುಲಭ ಮಾರ್ಗಗಳು

ಪ್ರೀತಿ ಅನ್ನೋದು ಅಲ್ಪ ಸಮಯಕ್ಕೆ ಸೀಮಿತವಾದ ಸಂಬಂಧವಲ್ಲ. ದಶಕಗಳ ಕಾಲ ಒಬ್ಬರಿಗೊಬ್ಬರು ಆಸರೆಯಾಗಿ ಬದುಕು ಸವೆಸುವ ಬುನಾದಿಯೇ ಪ್ರೀತಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಬ್ರೇಕಪ್‌, ಡೈವೋರ್ಸ್‌ ಇವೆಲ್ಲ ಕಾಮನ್‌ ಆಗಿಬಿಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಸಂಬಂಧದಲ್ಲಿ ಪರಸ್ಪರ ನಂಬಿಕೆ ಇಲ್ಲದೇ ಇರುವುದು. ಪರಸ್ಪರರನ್ನು ಗೌರವಿಸದೇ ಇರುವುದು.

ನೀವು ಕೂಡ ನಿಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಿದ್ದರೆ ಮತ್ತು ನಿಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿಡಲು ಬಯಸಿದರೆ, ಕೆಲವು ವಿಷಯಗಳತ್ತ ಗಮನ ಹರಿಸಬೇಕು. ಸಂಬಂಧವನ್ನು ಗಟ್ಟಿಗೊಳಿಸಲು ಬೇಕಾದ ಮಹತ್ವದ ಅಂಶಗಳನ್ನು ನೋಡೋಣ.

ಸಂಗಾತಿಗೆ ಸಮಯ ನೀಡಿ: ಪರಸ್ಪರರಿಗೋಸ್ಕರ ಸಮಯ ಮೀಸಲಿಡುವುದು ಬಹಳ ಮುಖ್ಯ. ಸಣ್ಣ ಪುಟ್ಟ ಸಭೆ ಸಮಾರಂಭಗಳಿಗೆ, ಸಿನೆಮಾ, ಪಾರ್ಕ್‌ ಹೀಗೆ ವಿವಿಧೆಡೆ ಜೊತೆಯಾಗಿ ಓಡಾಡುತ್ತ ಸಮಯ ಕಳೆಯಿರಿ. ಹಲವು ದಿನಗಳವರೆಗೆ ಸಂಗಾತಿಯನ್ನು ಭೇಟಿಯಾಗದೇ ಇದ್ದರೆ ಸಂಬಂಧ ಹಳಸುತ್ತದೆ.

ಸಂಗಾತಿಯ ಆದ್ಯತೆಗಳನ್ನು ಗಮನಿಸಿ: ನಿಮ್ಮ ಸಂಗಾತಿ ಏನನ್ನು ಇಷ್ಟಪಡುತ್ತಾರೆ, ಏನನ್ನು ಇಷ್ಟಪಡುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ. ನಿಮ್ಮ ಸಂಗಾತಿ ಇಷ್ಟಪಡುವ ವಿಷಯಗಳ ಬಗ್ಗೆ ನೀವು ಕಾಳಜಿ ವಹಿಸಿದರೆ ಇಬ್ಬರ ಮಧ್ಯೆ ಪ್ರೀತಿ ಹೆಚ್ಚುತ್ತದೆ.

ಅನುಮಾನ ಬೇಡ : ಪರಸ್ಪರರ ಮೇಲೆ ನಂಬಿಕೆ ಇಡುವುದು ಬಹಳ ಮುಖ್ಯ. ಸಂಗಾತಿಯನ್ನು ನಂಬದೇ ಅನುಮಾನಪಟ್ಟರೆ ಸಂಬಂಧ ಹಳಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಹಂಚಿಕೊಳ್ಳಿ. ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಸಂಬಂಧ ಗಟ್ಟಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...