alex Certify ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಧೂಮಪಾನ…! ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಧೂಮಪಾನ…! ಫೋಟೋ ವೈರಲ್

ನೆರೆಯ ಶ್ರೀಲಂಕಾ ದೇಶದ ಆರ್ಥಿಕ ಬಿಕ್ಕಟ್ಟು ಗಂಭೀರವಾಗಿದ್ದು, ಆ ದೇಶದ ಅಧ್ಯಕ್ಷ ಗೋತಬಯ ರಾಜಪಕ್ಸೆ ಕೊಲಂಬೊದಲ್ಲಿರುವ ಜನರ ಕೋಪ ತಾಳಲಾರದೇ ಅಧ್ಯಕ್ಷೀಯ ಭವನದಿಂದ ಪಲಾಯನ ಮಾಡಿದ್ದಾರೆ.

ಸಾವಿರಾರು ಪ್ರತಿಭಟನಾಕಾರರು ಅವರ ಅಧಿಕೃತ ಸರ್ಕಾರಿ ನಿವಾಸ್ ಕಾಂಪೌಂಡ್‌ ಒಳಗೆ ನುಗ್ಗಿ ಪ್ರತಿಭಟಿಸಿದ್ದಾರೆ. ಕೆಲವು ಪ್ರತಿಭಟನಾಕಾರರು ಕೊಳದಲ್ಲಿ ಸ್ನಾನ ಮಾಡಿದರೆ, ಇನ್ನು ಕೆಲವರು ಅಡುಗೆಮನೆಯಲ್ಲಿ ತಿನ್ನುವ, ಐಷಾರಾಮಿ ಕೊಠಡಿಗಳಲ್ಲಿ ವಿಶ್ರಾಂತಿ ಪಡೆಯುವ, ಜಿಮ್ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವು.

ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ಅಧ್ಯಕ್ಷರ ನಿವಾಸದಲ್ಲಿ ಒಟ್ಟಿಗೆ ಕುಳಿತು ಸಾಮೂಹಿಕವಾಗಿ ಧೂಮಪಾನ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.
“ಶ್ರೀಲಂಕಾದ ಅಧ್ಯಕ್ಷರ ಮನೆಯಲ್ಲಿ ಈಗಿನ ಸಂದರ್ಭ: ನಾವು ಪ್ರಸ್ತುತ ಸರ್ಕಾರವನ್ನು ಉರುಳಿಸುತ್ತಿದ್ದೇವೆ” ಎಂದು ರೆಡ್ಡಿಟ್ ಬಳಕೆದಾರರು ಹಾಸ್ಯಮಯ ಶೀರ್ಷಿಕೆ ನೀಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ಟ್ವಿಟರ್ ಬಳಕೆದಾರರೊಬ್ಬರು ಮಾಡಿದ್ದ ಪೋಸ್ಟ್‌ನಲ್ಲಿ ಯುವಕರ ಗುಂಪು ಪ್ರಧಾನಿ ನಿವಾಸದಲ್ಲಿ ಹಾಸಿಗೆಯ ಮೇಲೆ ಕುಸ್ತಿಯಾಡುತ್ತಿರುವುದನ್ನು ತೋರಿಸಿತ್ತು.

Sri Lankan Protester Rolls a Joint at President's House After 'Overthrowing Govt'

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...