alex Certify ಶೂನ್ಯಕ್ಕೆ ತಲುಪಿದ ಸಕ್ರಿಯ ಪ್ರಕರಣ: ಅರುಣಾಚಲ ಪ್ರದೇಶ ಇದೀಗ ಕೊರೊನಾ ಮುಕ್ತ ರಾಜ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೂನ್ಯಕ್ಕೆ ತಲುಪಿದ ಸಕ್ರಿಯ ಪ್ರಕರಣ: ಅರುಣಾಚಲ ಪ್ರದೇಶ ಇದೀಗ ಕೊರೊನಾ ಮುಕ್ತ ರಾಜ್ಯ

ಲೋಹಿತ್​ ಜಿಲ್ಲೆಯಲ್ಲಿದ್ದ ಏಕೈಕ ಸೋಂಕಿತ ವ್ಯಕ್ತಿಯು ಗುಣಮುಖರಾದ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಭಾನುವಾರದಿಂದ ಕೊರೊನಾ ಮುಕ್ತ ರಾಜ್ಯವಾಗಿ ಬದಲಾಗಿದೆ ಎಂದು ಅರುಣಾಚಲ ಪ್ರದೇಶದ ಹಿರಿಯ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯು 64,188 ಇದ್ದು ಇಲ್ಲಿಯವರೆಗೆ 296 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಅಲ್ಲದೇ ಕೊರೊನಾ ಸಾವು ಕೂಡ ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

ಅರುಣಾಚಲ ಪ್ರದೇಶದಲ್ಲಿ ಕೊರೊನಾ ರಿಕವರಿ ದರವು 12.68 ಪ್ರತಿಶತವಾಗಿದೆ. ಇಲ್ಲಿಯವರೆಗೆ 16,58,536 ಮಂದಿ ಕೊರೊನಾ ಲಸಿಕೆಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...