alex Certify ‘ಶಿಕ್ಷಕರ ದಿನಾಚರಣೆ’ಯಂದೇ ಶಾಕಿಂಗ್ ವಿಡಿಯೋ ಬಹಿರಂಗ; ಟ್ಯೂಷನ್ ಗೆ ಬರುತ್ತಿದ್ದ ಹುಡುಗಿಗೆ ಗುರುವಿನಿಂದಲೇ ಪ್ರಪೋಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶಿಕ್ಷಕರ ದಿನಾಚರಣೆ’ಯಂದೇ ಶಾಕಿಂಗ್ ವಿಡಿಯೋ ಬಹಿರಂಗ; ಟ್ಯೂಷನ್ ಗೆ ಬರುತ್ತಿದ್ದ ಹುಡುಗಿಗೆ ಗುರುವಿನಿಂದಲೇ ಪ್ರಪೋಸ್

ದೇಶದಾದ್ಯಂತ ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎಂಬ ನಾಣ್ಣುಡಿ ಬಳಿಕ ಮುಂದಿನ ಜೀವನವನ್ನು ರೂಪಿಸುವವರು ಶಿಕ್ಷಣ ನೀಡಿದ ಗುರುಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೆಲವೊಂದು ಪ್ರಕರಣಗಳು ಇದರ ಹೊರತಾಗಿಯೂ ಇರುತ್ತವೆ.

ಅಂತವುದೇ ಪ್ರಕರಣ ಒಂದರ ವರದಿ ಇಲ್ಲಿದೆ. ಶಿಕ್ಷಕನೊಬ್ಬ ತನ್ನ ಬಳಿ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ವಿದ್ಯಾರ್ಥಿನಿಗೆ ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದು, ಆಕೆ ನಿರಾಕರಿಸಿದ ವೇಳೆ ಇನ್ನಿಲ್ಲದಂತೆ ಕಿರುಕುಳ ನೀಡಿದ್ದಾನೆ. ಈ ಘಟನೆ ಬಿಹಾರದಲ್ಲಿ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಹಾರದ ಸಿವಾನ್ ಜಿಲ್ಲೆಯ ಗ್ರಾಮ ಒಂದರಲ್ಲಿ ಈ ಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದಾನೆ. ಇದನ್ನು ನಿರಾಕರಿಸಿದ ಆಕೆ ತನ್ನ ಪೋಷಕರ ಬಳಿ ವಿಷಯ ತಿಳಿಸಿದ್ದು, ಗ್ರಾಮಸ್ಥರೊಂದಿಗೆ ಬಂದ ಪೋಷಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಆತನಿಗೆ ಉಠ್ ಬೈಸ್ ಮಾಡಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...