alex Certify ಶಾಕಿಂಗ್ ನ್ಯೂಸ್: ವಿದ್ಯಾರ್ಥಿನಿ ದೈಹಿಕವಾಗಿ ಬದಲಾದ ನಂತ್ರ ಬಯಲಾಯ್ತು ಅತ್ಯಾಚಾರದ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ವಿದ್ಯಾರ್ಥಿನಿ ದೈಹಿಕವಾಗಿ ಬದಲಾದ ನಂತ್ರ ಬಯಲಾಯ್ತು ಅತ್ಯಾಚಾರದ ರಹಸ್ಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಸಾಕು ತಂದೆ ಹಾಗೂ ಎದುರು ಮನೆಯ ವ್ಯಕ್ತಿ ನಿರಂತರ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

36 ವರ್ಷದ ಆರೋಪಿ ಮೊದಲ ಪತ್ನಿಯಿಂದ ದೂರವಾಗಿದ್ದು, ಬೇರೆ ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಈ ಸಂದರ್ಭದಲ್ಲಿ ಪರಿಚಯವಾದ ವಿಧವೆಯ ಜೊತೆಗೆ ತನ್ನ ಊರಿನಲ್ಲಿಯೇ ವಾಸವಾಗಿದ್ದಾನೆ. ವಿಧವೆಯ 12 ವರ್ಷದ ಪುತ್ರಿಯ ಮೇಲೆ ಆರೋಪಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಇವರ ಮನೆಯ ಎದುರಲ್ಲೇ ವಾಸವಾಗಿರುವ 43 ವರ್ಷದ ಮತ್ತೊಬ್ಬ ಆರೋಪಿ ಕೂಡ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ.

ಬಾಲಕಿ ದೈಹಿಕವಾಗಿ ಬದಲಾವಣೆಯಾಗಿರುವುದನ್ನು ಗಮನಿಸಿದ ಶಿಕ್ಷಕಿ ವಿಚಾರಿಸಿದಾಗ ನೀಚ ಕೃತ್ಯದ ವಿಷಯ ಬೆಳಕಿಗೆ ಬಂದಿದೆ. ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಇಬ್ಬರ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...