alex Certify ವೈರಲ್‌ ಆಗಿದೆ ನೀರು ಕುಡಿಯಲು ಬಂದ ಚಿರತೆ ಮೊಸಳೆಗೆ ಆಹಾರವಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್‌ ಆಗಿದೆ ನೀರು ಕುಡಿಯಲು ಬಂದ ಚಿರತೆ ಮೊಸಳೆಗೆ ಆಹಾರವಾದ ವಿಡಿಯೋ

ಮೊಸಳೆ ಹೆಸರು ಕೇಳಿದ್ರೇನೇ ಒಂಥರಾ ಭಯ. ಯಾವ ಪ್ರಾಣಿಗೂ ಹೆದರದ ಜೀವಿ ಇದು. ಎಂಥಾ ಶಕ್ತಿಶಾಲಿಯನ್ನಾದರೂ ಮುಗಿಸಬಲ್ಲ ತಾಕತ್ತು ಇದಕ್ಕಿದೆ. ನೀರಿನಿಂದ ಹೊರಬಂದ ನಂತರವೂ ಮೊಸಳೆ ಬೇಟೆಯಾಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಆದ್ರೆ ನೀರಿನಲ್ಲಿ ಅದರ ಸಾಮರ್ಥ್ಯವು ಬಹಳ ಪಟ್ಟು ಹೆಚ್ಚಾಗುತ್ತದೆ.

ಚಿರತೆ ಹಾಗೂ ಮೊಸಳೆ ನಡುವಣ ಜಟಾಪಟಿಯ ವಿಡಿಯೋ ಈಗ ವೈರಲ್‌ ಆಗಿದೆ. ನೀರು ಕುಡಿಯಲು ನದಿಗೆ ಬಂದ ಚಿರತೆಯನ್ನು ಮೊಸಳೆ ಇಡಿಯಾಗಿ ನುಂಗಿರುವ ದೃಶ್ಯ ಅತ್ಯಂತ ಭಯಾನಕವಾಗಿದೆ. ಎಂಥಾ ಗಟ್ಟಿ ಗುಂಡಿಗೆಯವರಲ್ಲೂ ನಡುಕ ಹುಟ್ಟಿಸುವಂತಿದೆ.

ಬಾಯಾರಿಕೆ ತಡೆಯಲಾಗದೇ ನದಿಯ ದಡಕ್ಕೆ ಬಂದಿದ್ದ ಚಿರತೆ ಕೂಡ ಅಲರ್ಟ್‌ ಆಗಿತ್ತು. ತನಗೆ ಅಪಾಯ ಆಗಬಹುದು ಅನ್ನೋ ಭಯದಲ್ಲಿ ಮೈಯ್ಯೆಲ್ಲಾ ಕಣ್ಣಾಗಿತ್ತು. ನೀರು ಕುಡಿಯಲಾರಂಭಿಸಿತ್ತು. ಸ್ವಲ್ಪವೂ ಸಪ್ಪಳವಾಗದಂತೆ ಅಲ್ಲಿಗೆ ಬಂದ ಮೊಸಳೆ ಚಿರತೆಯ ಕುತ್ತಿಗೆಗೆ ಬಾಯಿ ಹಾಕಿದೆ.

ತನ್ನ ಬಲವಾದ ದವಡೆಯಿಂದ ಕತ್ತನ್ನು ಕಚ್ಚಿ ಹಿಡಿದು ಬಿಟ್ಟಿದೆ. ಎಷ್ಟು ಒದ್ದಾಡಿದ್ರೂ ಮೊಸಳೆ ಬಾಯಿಯಿಂದ ಪಾರಾಗಲು ಚಿರತೆಗೆ ಸಾಧ್ಯವಾಗಲೇ ಇಲ್ಲ. ಮೊಸಳೆ ಚಿರತೆಯನ್ನು ನೀರಿನೊಳಕ್ಕೆ ಎಳೆದೊಯ್ದಿದೆ. ಚಿರತೆಯ ಕತ್ತು ಮುರಿದು ತಿಂದು ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿ ಜನರು ದಿಗ್ಭ್ರಮೆಗೊಂಡಿದ್ದಾರೆ.

https://www.instagram.com/reel/CbP_vFlAZnT/?utm_source=ig_embed&ig_rid=1deebcff-efa9-466f-8f6f-317007f84c52

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...