alex Certify ವೈರಲ್‌ ಆಗಿದೆ ಕಿಡ್ನಾಪ್‌ ಆಗ್ತಿದ್ದ ಮಕ್ಕಳನ್ನು ರಕ್ಷಿಸಲು ಈ ತಾಯಿ ಮಾಡಿರೋ ಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್‌ ಆಗಿದೆ ಕಿಡ್ನಾಪ್‌ ಆಗ್ತಿದ್ದ ಮಕ್ಕಳನ್ನು ರಕ್ಷಿಸಲು ಈ ತಾಯಿ ಮಾಡಿರೋ ಸಾಹಸ

ಅಮೆರಿಕದಲ್ಲಿ ಮಹಿಳೆಯೊಬ್ಬಳು ಪ್ರಾಣದ ಹಂಗು ತೊರೆದು ಅಪಹರಣಕಾರರಿಂದ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ ವಿಡಿಯೋ ವೈರಲ್‌ ಆಗಿದೆ. 33 ವರ್ಷದ ಮೆಲೊಡಿ ಮಲ್ಡೊನಾಡೊ ಎಂಬ ಮಹಿಳೆ ನ್ಯೂ ಮೆಕ್ಸಿಕೋದ ಅಂಗಡಿಯೊಂದರ ಮುಂದೆ ಕಾರು ನಿಲ್ಲಿಸಿದ್ಲು.

ಆಕೆಯ 6 ವರ್ಷದ ಮಗಳು ಮತ್ತು 11 ತಿಂಗಳ ಮಗನನ್ನು ಕಾರಿನಲ್ಲೇ ಕೂರಿಸಿ ಏನೋ ಖರೀದಿಸಲು ತೆರಳಿದ್ದಾಳೆ. ವಾಪಸ್‌ ಬಂದು ಕಾರು ಏರಬೇಕು ಎನ್ನುವಷ್ಟರಲ್ಲಿ ಮಹಿಳೆಯೊಬ್ಬಳು ಆಕೆಯನ್ನು ತಳ್ಳಿ ತಾನು ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತಿದ್ದಾಳೆ.

ಮಕ್ಕಳನ್ನು ಕಿಡ್ನಾಪ್‌ ಮಾಡಿಕೊಂಡು ಹೊರಟೇ ಬಿಟ್ಟಿದ್ದಾಳೆ. ಮಕ್ಕಳನ್ನು ಹೇಗಾದ್ರೂ ರಕ್ಷಣೆ ಮಾಡಬೇಕೆಂದು ಓಡಿದ ಮೆಲೊಡಿ, ಚಲಿಸ್ತಾ ಇದ್ದ ಕಾರಿನ ಹುಡ್‌ ಮೇಲೆ ಹತ್ತಿಕೊಂಡು ಕಿಡ್ನಾಪರ್‌ ಮಹಿಳೆಯನ್ನು ತಡೆಯಲು ಯತ್ನಿಸಿದ್ದಾಳೆ. ಆದ್ರೆ ಅಪಹರಣಕಾರ್ತಿ ಯರ್ರಾಬಿರ್ರಿ ಕಾರು ಚಲಾಯಿಸಿದ್ದರಿಂದ ಮೆಲೊಡಿ ಕೆಳಕ್ಕೆ ಬಿದ್ದಿದ್ದು, ಆಕೆಯ ಕಾಲಿಗೆ ಏಟಾಗಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಮೆಲೊಡಿ ತನ್ನ ಮಕ್ಕಳನ್ನು ಬಚಾವ್‌ ಮಾಡುವಂತೆ ಮೊರೆಯಿಟ್ಟಿದ್ದಾಳೆ. ಮತ್ತೊಂದೆಡೆ ಮಕ್ಕಳನ್ನು ಕಿಡ್ನಾಪ್‌ ಮಾಡಿಕೊಂಡು ಹೋದ ರೆಗಿನಾ ಕಾಸ್ಟಿಲ್ಲೊ ಎಂಬ ಮಹಿಳೆ ಸ್ವಲ್ಪ ದೂರ ತೆರಳಿದ ಬಳಿಕ 6 ವರ್ಷದ ಬಾಲಕಿಯನ್ನು ಕೆಳಕ್ಕಿಳಿಸಿದ್ದಾಳೆ. 11 ತಿಂಗಳ ಮಗುವನ್ನು ಅಪಹರಿಸಿಕೊಂಡು ಪಿಕಪ್‌ ಟ್ರಕ್‌ ಒಂದರ ಹಿಂದೆ ಅಡಗಿ ಕುಳಿತಿದ್ದಾಳೆ.

ಆಕೆಯನ್ನು ಪತ್ತೆ ಮಾಡಿದ ಪೊಲೀಸರು ಮಕ್ಕಳನ್ನು ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿಸಿದ್ದಾರೆ. ಬಂಧಿತ ಅಪಹರಣಕಾರ್ತಿ ರೆಗೀನಾ ಇನ್ನೂ 3 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಳು. ಮಕ್ಕಳನ್ನು ರಕ್ಷಿಸಲು ತಾಯಿ ಮಾಡಿದ ಸಾಹಸ ವೈರಲ್‌ ಆಗಿದ್ದು, ವಿಡಿಯೋ ನೋಡಿದವರೆಲ್ಲ ಮಹಿಳೆಯನ್ನು ಶ್ಲಾಘಿಸಿದ್ದಾರೆ.

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...