alex Certify ವೇದಿಕೆ ಮೇಲೆ ಹಾಡುತ್ತಿದ್ದಾಗಲೇ ಕಳಚಿತು ಪಾಪ್ ಗಾಯಕಿಯ ಉಡುಪು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇದಿಕೆ ಮೇಲೆ ಹಾಡುತ್ತಿದ್ದಾಗಲೇ ಕಳಚಿತು ಪಾಪ್ ಗಾಯಕಿಯ ಉಡುಪು…..!

ಪಾಪ್‌ಸ್ಟಾರ್ ಮಿಲಿ ಸೈರಸ್ 2022 ರ ಹೊಸ ವರ್ಷದ ಮುನ್ನಾದಿನ ಶುಕ್ರವಾರದಂದು ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ತಮ್ಮ ಗಾಯನದ ಮೂಲಕ ರಂಜಿಸುತ್ತಿದ್ದರು. ಆದರೆ, ಈ ವೇಳೆ ಆಕೆ ಧರಿಸಿದ್ದ ಸಿಲ್ವರ್ ಕಲರ್ ಕ್ರಾಪ್ ಟಾಪ್ ಕಳಚಿಕೊಂಡಿದ್ದು, ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಬಿತ್ತರವಾಗಿದೆ.

ನೇರಪ್ರಸಾರದ ವೇಳೆ ಪಾಪ್ ಗಾಯಕಿಯ ಉಡುಪು ಆಕಸ್ಮಾತ್ ಆಗಿ ಕಳಚಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಮಿಲಿ ಸೈರಸ್ ತನ್ನ ಟ್ವಿಟ್ಟರ್ ಪುಟದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ಸ್ವತಃ ತಿಳಿಸುತ್ತಾ, ತಾನು ಬಹಳ ಸಂತೋಷವಾಗಿದ್ದು, ಪ್ರತಿ ಕ್ಷಣವನ್ನೂ ಪ್ರೀತಿಸುವುದಾಗಿ ಟ್ವೀಟ್ ಮಾಡಿದ್ದಾರೆ.

ಅಮೆರಿಕಾದಲ್ಲಿ ಹೊಸವರ್ಷದ ಸ್ವಾಗತಕ್ಕೆ ನಡೆದ ಕಾರ್ಯಕ್ರಮದಲ್ಲಿ ಗಾಯಕಿ ಸೈರಸ್ ವೇದಿಕೆ ಮೇಲೆ ನಿಂತು ಬಹಳ ಜೋಶ್ ನಿಂದ ಹಾಡುತ್ತಿದ್ದರು. ಈ ವೇಳೆ ಏಕಾಏಕಿ ಆಕೆಯ ಉಡುಪು ಕಳಚಿದೆ. ಕೂಡಲೇ ಕ್ಯಾಮರಾವನ್ನು ಪ್ರೇಕ್ಷಕರ ಕಡೆಗೆ ತಿರುಗಿಸಲಾಗಿದ್ದು, ಮತ್ತದೇ ಜೋಶ್ ನಲ್ಲಿ ಕೆಂಪು ಬಣ್ಣದ ಕೋಟ್ ಧರಿಸಿದ ಸೈರಸ್ ಪ್ರದರ್ಶನವನ್ನು ಮುಂದುವರೆಸಿದ್ದರು. ನೆರೆದಿದ್ದ ಜನರು ಗಾಯಕಿಯ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.

— Miley Central (@MileyCentraI) January 1, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...