alex Certify ವೃದ್ಧನನ್ನು ಅಮಾನುಷವಾಗಿ ಥಳಿಸಿದ ಭದ್ರತಾ ಸಿಬ್ಬಂದಿ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧನನ್ನು ಅಮಾನುಷವಾಗಿ ಥಳಿಸಿದ ಭದ್ರತಾ ಸಿಬ್ಬಂದಿ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ರೈಲ್ವೆ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಅವಘಡಕ್ಕೆ ಸಿಲುಕಿದ ಸಂದರ್ಭದಲ್ಲಿ ರಕ್ಷಿಸುವ ಅನೇಕ ಉದಾಹರಣೆ ಇದೆ. ಇಂತಹ ನೂರಾರು ಪ್ರಕರಣಗಳಿದ್ದು, ವಿಡಿಯೋಗಳ ಕೂಡ ಆಗಾಗ್ಗೆ ವೈರಲ್​ ಆಗುತ್ತಿರುತ್ತದೆ. ಇಂತಹ ಪ್ರಕರಣಕ್ಕೆ ವ್ಯತಿರಿಕ್ತವಾಗಿ ಒಂದು ಘಟನೆ ನಡೆದಿದೆ.

ರೈಲ್ವೆ ನಿಲ್ದಾಣದ ಭದ್ರತಾ ಸಿಬ್ಬಂದಿ ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗ ಹೊಡೆಯುವ, ಬೂಟು ಕಾಲಿನಿಂದ ಮೈಕೈ ಜಖಂಗೊಳಿಸುವ ವಿಡಿಯೋ ಕ್ಲಿಪ್​ ವೈರಲ್​ ಆಗಿದೆ.

ಈ ಘಟನೆ ಎಲ್ಲಿ ನಡೆದಿದ್ದು ಎಂಬುದು ಗೊತ್ತಾಗಿಲ್ಲ. ಆದರೆ, ಆ ಭದ್ರತಾ ಸಿಬ್ಬಂದಿ ಅಮಾನುಷವಾಗಿ ನಡೆದುಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿದ್ದಾನೆ ಎಂಬುದು ಖಚಿತವಾಗಿದೆ.

ವೃದ್ಧನೊಬ್ಬನ ಮೇಲೆ ದಾಳಿ ನಡೆಸುವ ಭದ್ರತಾ ಸಿಬ್ಬಂದಿ, ಒಂದು ಹಂತದಲ್ಲಿ ಎರಡು ಕಾಲನ್ನು ಹಿಡಿದು, ದೇಹವನ್ನು ಟ್ರಾಕ್​ನತ್ತ ಬಗ್ಗಿಸಿ ಹಿಂಸಿಸುವುದು ವಿಡಿಯೋದಲ್ಲಿ ಕಾಣಸಿಗುತ್ತದೆ. ಅಲ್ಲಿ ಕೆಲವು ಜನರಿದ್ದರೂ ಯಾರೂ ರಕ್ಷಿಸುವ ಗೋಜಿಗೆ ಹೋಗುವುದಿಲ್ಲ.

ನೆಟ್ಟಿಗರು ಈ ಹಲ್ಲೆಯನ್ನು ಖಂಡಿಸಿದ್ದಾರೆ. ಏಕೆ ಹೊಡೆಯಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ, ಆದರೆ, ಈ ರೀತಿ ಹೊಡೆಯಲು ಯಾರಿಗೂ ಅವಕಾಶವಿಲ್ಲ. ಭದ್ರತಾ ಸಿಬ್ಬಂದಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...