alex Certify ವಿಶ್ವ ದಾಖಲೆ ಪುಟ ಸೇರಿದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ದಾಖಲೆ ಪುಟ ಸೇರಿದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ..!

ಇಸ್ರೇಲ್​ನಲ್ಲಿ ಬೆಳೆಯಲಾದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ ಹಣ್ಣು ವಿಶ್ವದ ಅತ್ಯಂತ ದೊಡ್ಡ ಸ್ಟ್ರಾಬೆರ್ರಿ ಎಂಬ ಖ್ಯಾತಿಯನ್ನು ಸಂಪಾದಿಸುವ ಮೂಲಕ ವಿಶ್ವ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ನೋಂದಾಯಿಸಿದೆ.

18 ಸೆಂಟಿಮೀಟರ್​ ಉದ್ದ ಹಾಗೂ ನಾಲ್ಕು ಸೆಂಟಿಮೀಟರ್​ ದಪ್ಪ, 34 ಸೆಂಟಿ ಮೀಟರ್​ ವ್ಯಾಸವನ್ನು ಹೊಂದಿರುವ ಈ ಸ್ಟ್ರಾಬೆರ್ರಿಯನ್ನು ಏರಿಯಲ್​ ಚಹಿಯಲ್ಲಿ ಬೆಳೆಯಲಾಗಿದೆ.

ಈ ಸ್ಟ್ರಾಬೆರ್ರಿಯು ಇಲಾನ್​ ವಿಭಾಗಕ್ಕೆ ಸೇರಿದೆ. ಇಸ್ರೆಲ್​ನ ಕಡಿಮಾ – ಜೋರಾನ್​ನಲ್ಲಿ ಇದನ್ನು ಬೆಳೆಯಲಾಗಿದೆ.

ಜನವರಿ ಅಂತ್ಯದಿಂದ ಫೆಬ್ರವರಿ ಆರಂಭದಲ್ಲಿ ಸಾಮಾನ್ಯವಾಗಿ ಶೀತ ಹವಾಮಾನ ಇರುತ್ತದೆ. ಈ ಸ್ಟ್ರಾಬೆರ್ರಿಯು ಇಷ್ಟು ದೊಡ್ಡ ಗಾತ್ರದಲ್ಲಿ ಬೆಳೆಯಲು ಸರಿ ಸುಮಾರು 45 ದಿನಗಳನ್ನು ತೆಗೆದುಕೊಂಡಿದೆ ಎಂದು ಗಿನ್ನೆಸ್​ ವಿಶ್ವ ದಾಖಲೆಗೆ ಡಾ. ನಿರ್​​ ದಾಯ್​ ಮಾಹಿತಿ ನೀಡಿದರು.

ಈ ಹಿಂದೆ 250 ಗ್ರಾಂ ತೂಕದ ಸ್ಟ್ರಾಬೆರ್ರಿ ವಿಶ್ವದ ಅತ್ಯಂತ ದೊಡ್ಡ ಸ್ಟ್ರಾಬೆರ್ರಿ ಎಂಬ ಖ್ಯಾತಿಯನ್ನು ಸಂಪಾದಿಸಿತ್ತು. ಜಪಾನ್​ನಲ್ಲಿ 2015ರ ಜನವರಿ 28ರಂದು ಈ ದಾಖಲೆಯನ್ನು ಸೃಷ್ಟಿಸಲಾಗಿತ್ತು. ಆದರೆ ಇದೀಗ ಈ ದಾಖಲೆಯನ್ನು ಇಸ್ರೇಲ್​ನ ಸ್ಟ್ರಾಬೆರ್ರಿ ಮುರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...