alex Certify ವಿಶ್ವದ ಅತಿ ಎತ್ತರದ ಯುವಕನ ಬಗ್ಗೆ ಮಾಹಿತಿ ಹಂಚಿಕೊಂಡ ಗಿನ್ನಿಸ್ ವರ್ಲ್ಡ್​ ರೆಕಾರ್ಡ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ಎತ್ತರದ ಯುವಕನ ಬಗ್ಗೆ ಮಾಹಿತಿ ಹಂಚಿಕೊಂಡ ಗಿನ್ನಿಸ್ ವರ್ಲ್ಡ್​ ರೆಕಾರ್ಡ್​

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​​ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಶ್ವದ ಅತಿ ಎತ್ತರದ ಯುವಕ 16 ವರ್ಷ ಪ್ರಾಯದ ಒಲಿವಿಯರ್​​ ರಿಯೊಕ್ಸ್​ ಜೀವನದ ಒಂದು ನೋಟವನ್ನು ಶೇರ್​ ಮಾಡಿದೆ.

7 ಅಡಿ ಹಾಗೂ 5 ಇಂಚು ಎತ್ತರದ ಒಲಿವಿಯರ್​ ರಿಯೊಕ್ಸ್​​ ಕೆನಡಾದಲ್ಲಿ ಬಾಸ್ಕೆಟ್​ ಬಾಲ್​ ಆಡುತ್ತಿರುವ ವಿಡಿಯೋ ಇದಾಗಿದೆ.

ಹುಟ್ಟುವಾಗ 3.4 ಕೆಜಿ ತೂಕ ಹೊಂದಿದ್ದ ರಿಯೊಕ್ಸ್​​ ಕೇವಲ 1 ತಿಂಗಳಲ್ಲಿ 7.2 ಕೆಜಿ ತೂಕವಾದರು. ಇದಾದ ಬಳಿಕೆ ಒಲಿವಿಯರ್​ ಬೆಳವಣಿಗೆ ಕ್ಷಿಪ್ರ ಗತಿಯಲ್ಲಿ ಸಾಗಿತು. ಐದನೇ ತರಗತಿಗೆ ಬರುವ ವೇಳೆಗೆ ಒಲಿವಿಯರ್​​ 5 ಅಡಿ 2 ಇಂಚು ಎತ್ತರಕ್ಕೆ ಬೆಳೆದಿದ್ದರು.

ಸಂಪೂರ್ಣ ಕುಟುಂಬದಲ್ಲೇ ರಿಯೊಕ್ಸ್​ ಅತೀ ಎತ್ತರದ ಯುವಕನಾದ ಹಿನ್ನೆಲೆಯಲ್ಲಿ ಒಲಿವಿಯರ್​​ ಎತ್ತರಕ್ಕೆ ಮನೆಯನ್ನು ನವೀಕರಿಸಲಾಗಿದೆ. ಟೇಬಲ್​ ಟಾಪ್ಸ್​ ಹಾಗೂ ಸೀಲಿಂಗ್ ಫ್ಯಾನ್​ಗಳನ್ನು ಇನ್ನೂ ಎತ್ತರದಲ್ಲಿ ಇಡಲಾಗಿದೆ ಎಂದು ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ಬರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...