alex Certify Video | ಲಿಂಬೋ ಸ್ಪೀಡ್ ಸ್ಕೇಟಿಂಗ್​​ನಲ್ಲಿ ತಮ್ಮದೇ ಗಿನ್ನೆಸ್​ ದಾಖಲೆ ಮುರಿದ ಸೃಷ್ಟಿ ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಲಿಂಬೋ ಸ್ಪೀಡ್ ಸ್ಕೇಟಿಂಗ್​​ನಲ್ಲಿ ತಮ್ಮದೇ ಗಿನ್ನೆಸ್​ ದಾಖಲೆ ಮುರಿದ ಸೃಷ್ಟಿ ಶರ್ಮಾ

ಭಾರತದ 18 ವರ್ಷದ ಸೂಪರ್​ ಸ್ಕೇಟರ್​ ಸೃಷ್ಟಿ ಧರ್ಮೇಂದ್ರ ಶರ್ಮಾ 50 ಮೀಟರ್​ಗಿಂತಲೂ ಅಧಿಕ ದೂರದವರೆಗೆ ಲಿಂಬೋ ಸ್ಕೇಟಿಂಗ್​ ಮಾಡುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.

2021ರಲ್ಲಿ 7.38 ಸೆಕೆಂಡು ದೂರ ಕ್ರಮಿಸಿ ಲಿಂಬೋ ಸ್ಕೇಟಿಂಗ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ಸೃಷ್ಟಿ ಇದೀಗ ತಮ್ಮದೇ ದಾಖಲೆಯನ್ನು ಮುರಿಯುವ ಮೂಲಕ ಹೊಸ ಗಿನ್ನೆಸ್​ ದಾಖಲೆ ಬರೆದಿದ್ದಾರೆ. ಅಂದಹಾಗೆ ಸೃಷ್ಟಿ 2015ರಿಂದಲೂ ತಮ್ಮದೇ ಗಿನ್ನೆಸ್​ ದಾಖಲೆಯನ್ನು ಮುರಿಯುತ್ತಾ ಬಂದಿದ್ದಾರೆ.

ಈ ಬಾರಿ ಸೃಷ್ಟಿ 6.94 ಸೆಕೆಂಡುಗಳಲ್ಲಿ ಲಿಂಬೋಸ್ಕೇಟಿಂಗ್​ ಮಾಡಿ ಮುಗಿಸುವ ಮೂಲಕ ಈ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಈ ಕ್ರೀಡೆಯಲ್ಲಿ ಭೂಮಿಯಿಂದ ಕೇವಲ 30 ಸೆಂಟಿ ಮೀಟರ್​ ಎತ್ತರದಲ್ಲಿ ಕಂಬಗಳನ್ನು ಅಡ್ಡಲಾಗಿ ಇಡಲಾಗುತ್ತದೆ.

ಲಿಂಬೋ ಸ್ಕೇಟಿಂಗ್​ ಮಾಡುವ ಸ್ಪರ್ಧಿಯು ಕಾಲುಗಳನ್ನು ಅಗಲ ಮಾಡಿ ದೇಹವನ್ನು ಸಂಪೂರ್ಣ ಬಾಗಿಸಬೇಕು. ಕೈಗಳು ಪಾದದ ಮೇಲೆ ಇರಬೇಕು. ನೆಲಕ್ಕೂ ದೇಹ ತಾಗದೇ ಇತ್ತ ಕಂಬಕ್ಕೂ ದೇಹವನ್ನು ತಾಗಿಸಿದೇ ಬಾಗಿಕೊಂಡೇ ಸ್ಕೇಟಿಂಗ್​ ಮಾಡಬೇಕು. ಈ ಕಠಿಣವಾದ ಸ್ಕೇಟಿಂಗ್​ ಸ್ಪರ್ಧೆಯಲ್ಲಿ ಸೃಷ್ಟಿ ವಿಶ್ವ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...