alex Certify ವಿಶ್ವಕಪ್‌ನ ಆರಂಭದಲ್ಲೇ ಡೆಂಗ್ಯೂಗೆ ತುತ್ತಾಗಿದ್ದಾರೆ ಭಾರತದ ಸ್ಟಾರ್‌ ಆಟಗಾರ, ಈ ಕಾಯಿಲೆ ಬರದಂತೆ ತಡೆಯೋದು ಹೇಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಕಪ್‌ನ ಆರಂಭದಲ್ಲೇ ಡೆಂಗ್ಯೂಗೆ ತುತ್ತಾಗಿದ್ದಾರೆ ಭಾರತದ ಸ್ಟಾರ್‌ ಆಟಗಾರ, ಈ ಕಾಯಿಲೆ ಬರದಂತೆ ತಡೆಯೋದು ಹೇಗೆ ಗೊತ್ತಾ….?

ಡೆಂಗ್ಯೂ ಒಂದು ವೈರಲ್ ಕಾಯಿಲೆ. ಪ್ರತಿವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲ ಮತ್ತು ಬದಲಾಗುತ್ತಿರುವ ಹವಾಮಾನದಲ್ಲಿ ಡೆಂಗ್ಯೂ ಅಪಾಯ ಹೆಚ್ಚು. ಈಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಬರುತ್ತದೆ. ತೀವ್ರ ಜ್ವರ, ತಲೆಸುತ್ತು, ತಲೆನೋವು, ನಿಧಾನ ಹೃದಯ ಬಡಿತ, ಕಣ್ಣುಗಳಲ್ಲಿ ನೋವು, ಸ್ನಾಯು ಮತ್ತು ಕೀಲುಗಳಲ್ಲಿ ತೀವ್ರವಾದ ನೋವು ಇವೆಲ್ಲ ಡೆಂಗ್ಯೂ ಲಕ್ಷಣಗಳು. ಡೆಂಗ್ಯೂ ಪೀಡಿತರಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುವುದರಿಂದ ದೌರ್ಬಲ್ಯ ಉಂಟಾಗುತ್ತದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ ಆರಂಭವಾಗಿದ್ದು, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್‌ ಡೆಂಗ್ಯೂಗೆ ತುತ್ತಾಗಿದ್ದಾರೆ. ಡೆಂಗ್ಯೂವಿನಿಂದ ಬಳಲುತ್ತಿರೋ ಶುಭಮನ್‌ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನು ಆಡುವುದು ಅನುಮಾನ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಭಾರತ-ಆಸೀಸ್‌ ನಡುವೆ ಪಂದ್ಯ ನಡೆಯಲಿದೆ. ಡೆಂಗ್ಯೂವಿನಿಂದ ಪಾರಾಗಲು ಕೆಲವೊಂದು ಮಾರ್ಗಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಅವು ಯಾವುವು ಅನ್ನೋದನ್ನು ನೋಡೋಣ.

ಡೆಂಗ್ಯೂ ತಡೆಗಟ್ಟುವ ಮಾರ್ಗಗಳು

ಸೊಳ್ಳೆಗಳ ಸಂತಾನೋತ್ಪತ್ತಿಗೆ ತಡೆ – ಡೆಂಗ್ಯೂ ಸೊಳ್ಳೆಗಳು ಶುದ್ಧ ಮತ್ತು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇದರಿಂದಾಗಿ ಅವುಗಳ ಸಂಖ್ಯೆಯು ವೇಗವಾಗಿ ಹೆಚ್ಚಾಗುತ್ತದೆ. ಇದನ್ನು ತಡೆಯಲು ಸ್ಥಳೀಯ ಪ್ರದೇಶದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಕ್ರಮಗಳನ್ನು ಕೈಗೊಳ್ಳಬಹುದು.

ಕಾರಂಜಿ ನೀರಿನಲ್ಲಿ ಔಷಧ ಸಿಂಪಡಿಸಿ. ಪ್ರತಿದಿನ ತಂಪಾದ ನೀರನ್ನು ಬದಲಿಸುತ್ತಿರಿ ಮತ್ತು ಅದರಲ್ಲಿ 2 ಚಮಚ ಸೀಮೆ ಎಣ್ಣೆಯನ್ನು ಸೇರಿಸಿ. ಮೇಲ್ಛಾವಣಿಯ ಮೇಲಿನ ನೀರಿನ ಟ್ಯಾಂಕ್‌ಗಳನ್ನು ಮುಚ್ಚಿ. ತೆಂಗಿನ ಚಿಪ್ಪು ಮತ್ತು ಹಳೆಯ ಟೈರ್‌ಗಳಲ್ಲಿ ಮಳೆ ನೀರು ಸಂಗ್ರಹವಾಗಲು ಬಿಡಬೇಡಿ.

ಸೊಳ್ಳೆ ಪರದೆ ಬಳಕೆ – ರಾತ್ರಿಯಾಗಲಿ ಅಥವಾ ಹಗಲಿರಲಿ  ಮಲಗುವಾಗ ಯಾವಾಗಲೂ ಸೊಳ್ಳೆ ಪರದೆಯನ್ನು ಬಳಸಿ. ಇದರಿಂದ ಡೆಂಗ್ಯೂ ಹರಡುವ ಸೊಳ್ಳೆಗಳು ನಮ್ಮ ಸಂಪರ್ಕಕ್ಕೆ ಬರದಂತೆ ತಡೆಯಬಹುದು. ಇದು ಈ ರೋಗದ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳನ್ನು ರಕ್ಷಿಸುತ್ತದೆ.

ಉದ್ದ ತೋಳಿನ ಬಟ್ಟೆಗಳನ್ನು ಧರಿಸಿ – ಮನೆಯಲ್ಲಿರಲಿ, ಹೊರಗಿರಲಿ ಉದ್ದ ತೋಳಿನ ಬಟ್ಟೆಗಳನ್ನು ಧರಿಸಬೇಕು. ಕಾಲುಗಳನ್ನು ಸಹ ಮುಚ್ಚುವಂತೆ ಪ್ಯಾಂಟ್‌ ಹಾಕಿಕೊಳ್ಳುವುದು ಸೂಕ್ತ. ಇದು ಸೊಳ್ಳೆಗಳು ಕಚ್ಚುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಕಿಟಕಿ ಮತ್ತು ಬಾಗಿಲಿಗೆ ಮೆಶ್‌ ಹಾಕಿ – ಮನೆಯೊಳಗೆ ಸೊಳ್ಳೆಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಿಸಬೇಕು. ಇದಕ್ಕಾಗಿ  ಮನೆಯ ಕಿಟಕಿ, ಬಾಗಿಲು ಮತ್ತು ಸ್ಕೈಲೈಟ್‌ಗಳಿಗೆ ಸ್ಟೀಲ್ ಅಥವಾ ಪ್ಲಾಸ್ಟಿಕ್‌ನ ಉತ್ತಮವಾದ ಮೆಶ್ ಅನ್ನು ಅಳವಡಿಸಿ. ಈ ಮೂಲಕ ಸೊಳ್ಳೆಗಳು ಒಳಪ್ರವೇಶಿಸದಂತೆ ತಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...