alex Certify ವರ ಹಾರ ಎಸೆದ ಎಂಬ ಕಾರಣಕ್ಕೆ ಮದುವೆಯೇ ರದ್ದು ಮಾಡಿದ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ ಹಾರ ಎಸೆದ ಎಂಬ ಕಾರಣಕ್ಕೆ ಮದುವೆಯೇ ರದ್ದು ಮಾಡಿದ ವಧು

ಲಕ್ನೋ : ಮದುವೆಗಳು ಯಾವ ಕಾರಣಕ್ಕೆ ನಿಲ್ಲುತ್ತವೆ ಎಂಬುವುದನ್ನೇ ಹೇಳಲು ಬಾರದ ಸ್ಥಿತಿ ಬಂದೊದಗಿದೆ. ಇತ್ತೀಚೆಗಂತೂ ಸಣ್ಣ ಪುಟ್ಟ ವಿಷಯಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿದ ಮದುವೆಗಳು ನಿಲ್ಲುತ್ತಿವೆ. ಇಂತಹ ಉದಾಹರಣೆಯೊಂದು ಬೆಳಕಿಗೆ ಬಂದಿದೆ.

ವರನು ಹಾರ ಹಾಕುವುದನ್ನು ಬಿಟ್ಟು ಎಸೆದಿದ್ದಾನೆ ಎಂಬ ಕಾರಣಕ್ಕೆ ಯುವತಿ ಮದುವೆಯನ್ನೇ ರದ್ದು ಮಾಡಿರುವ ಪ್ರಸಂಗ ನಡೆದಿದೆ. ಈ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

ವರ ಹಾರವನ್ನು ಹಾಕುವಾಗ ಎಸೆದಿದ್ದಾನೆ. ಹೀಗಾಗಿ ಮದುವೆ ಮನೆಯಲ್ಲಿಯೇ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ವಧು ಆತನೊಂದಿಗೆ ಮದುವೆಯೇ ಬೇಡ ಎಂದು ಪಟ್ಟು ಹಿಡಿದಿದ್ದಾಳೆ. ಅಲ್ಲಿದ್ದ ಜನರು ಎಷ್ಟೇ ಬುದ್ಧಿವಾದ ಹೇಳಿದರೂ ವಧು ಮಾತ್ರ ತನ್ನ ಪಟ್ಟು ಬಿಡಲಿಲ್ಲ. ಅನಿವಾರ್ಯವಾಗಿ ತಮ್ಮ ತಮ್ಮ ಉಡುಗೊರೆಗಳನ್ನು ಹಿಂಪಡೆದು ಮದುವೆ ರದ್ದು ಮಾಡಿಕೊಂಡಿದ್ದಾರೆ.

ಸದ್ಯ ಈ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಲವರು ಶುಭ ಸಂದರ್ಭದಲ್ಲಿ ವರ ಈ ರೀತಿಯಾಗಿ ವರ್ತಿಸಬಾರದು ಎಂದರೆ, ಹಲವರು ವಧುವಿನ ಮೊಂಡುತನ ಮಿತಿ ಮೀರಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...