alex Certify ವರ್ಷಾಂತ್ಯಕ್ಕೆ ರಸ್ತೆಗಿಳಿಯಲಿವೆ ಇನ್ನಷ್ಟು ಎಲೆಕ್ಟ್ರಿಕ್ ಬಸ್…..! ಖಾಸಗೀಕರಣದ ಆತಂಕದಲ್ಲಿ KSRTC ನೌಕರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷಾಂತ್ಯಕ್ಕೆ ರಸ್ತೆಗಿಳಿಯಲಿವೆ ಇನ್ನಷ್ಟು ಎಲೆಕ್ಟ್ರಿಕ್ ಬಸ್…..! ಖಾಸಗೀಕರಣದ ಆತಂಕದಲ್ಲಿ KSRTC ನೌಕರರು

ಬೆಂಗಳೂರಿನಲ್ಲಿ ನಿತ್ಯ ಜನರ ಜೀವನಾಡಿ ಬಿಎಂಟಿಸಿ. ಲಕ್ಷಾಂತರ ಜನ ಬಿಎಂಟಿಸಿ ನಂಬಿಕೊಂಡೇ ಪ್ರಯಾಣ ಮಾಡ್ತಾ ಇದ್ದಾರೆ. ಮೆಟ್ರೋ ಇದ್ದರೂ ಕೂಡ ಬಿಎಂಟಿಸಿ ಬಸ್ ಗೆ ನೆಚ್ಚಿಕೊಂಡವರು ಅನೇಕರು. ಇದೀಗ ಈ ಬಿಎಂಟಿಸಿ ಬಸ್ ಗಳು ಇನ್ಮುಂದೆ ಪರಿಸರ ಸ್ನೇಹಿಯಾಗಲಿವೆ.

ಹೌದು, ಈಗಾಗಲೇ ಎಲೆಕ್ಟ್ರಿಕ್ ಬಸ್ ಗಳು ನಗರದಲ್ಲಿ ಸಂಚಾರ ಮಾಡ್ತಾ ಇವೆ. ಸುಮಾರು 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಸಂಚಾರ ಮಾಡ್ತಾ ಇದ್ದು, ಈ ವರ್ಷದಾಂತ್ಯಕ್ಕೆ ಇನ್ನೂ 1000 ಸಾವಿರ ಎಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಸೋ ಪ್ಲಾನ್ ಮಾಡಿಕೊಂಡಿದೆ ಸರ್ಕಾರ. ಆದರೆ ಇದೀಗ ಆತಂಕವೊಂದು ಎದುರಾಗಿದೆ. ಈ ಬಸ್ ಗಳ ಮೂಲಕ ಖಾಸಗೀಕರಣ ಆಗಲಿದೆ ಅನ್ನೋದು ನೌಕರರ ವಾದ.

ಸರ್ಕಾರ ಈ ಬಸ್ ಗಳನ್ನು ರಸ್ತೆಗಿಳಿಸೋ ಮೂಲಕ ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ನೌಕರರು ಬೀದಿಗೆ ಬೀಳ್ತಾರೆ ಎಂದು ಹೇಳುತ್ತಿದ್ದಾರೆ. ಈ ಬಸ್ ಗಳಿಗೆ ನಮ್ಮ ನೌಕರರನ್ನೇ ಬಳಸಿಕೊಳ್ಳಿ ಅನ್ನೋದು ಅವರ ವಾದವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...