alex Certify ವರಮಹಾಲಕ್ಷ್ಮಿ ಹಬ್ಬದಂದು ತೆರೆಮೇಲೆ ಬರಲಿದೆ ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರಮಹಾಲಕ್ಷ್ಮಿ ಹಬ್ಬದಂದು ತೆರೆಮೇಲೆ ಬರಲಿದೆ ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಸಿನಿಮಾ

ಲೂಸ್ ಮಾದ ಯೋಗಿ ಅಭಿನಯದ ಎಮ್.ಡಿ. ರಾಮ್ ಪ್ರಸಾದ್ ನಿರ್ದೇಶನದ ‘ಲಂಕೆ’ ಚಿತ್ರವನ್ನು ಮುಂದಿನ ತಿಂಗಳು ಆಗಸ್ಟ್ 20 ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ರಾಮ್ ಪ್ರಸಾದ್ ತಿಳಿಸಿದ್ದಾರೆ.

‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 4 ವರ್ಷ

ಈ ಚಿತ್ರ ಈಗಾಗಲೇ ಮೋಷನ್ ಪೋಸ್ಟರ್ ಮೂಲಕ ಸಾಕಷ್ಟು ಸದ್ದು ಮಾಡಿದೆ. ಲೂಸ್ ಮಾದ ಯೋಗಿ ಅವರ ಖಡಕ್ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಾವ್ಯ ಶೆಟ್ಟಿ ಈ ಸಿನಿಮಾ ನಾಯಕಿಯಾಗಿ ಅಭಿನಯಿಸಿದ್ದು, ಸಂಚಾರಿ ವಿಜಯ್, ಕೃಷಿ ತಾಪಂಡ ಸುಚೇಂದ್ರ ಪ್ರಸಾದ್ ಶರತ್ ಲೋಹಿತಾಶ್ವ, ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ದಿ ಗ್ರೇಟ್ ಎಂಟರ್ ಟೇನರ್ ಬ್ಯಾನರ್ ನಡಿ ಪಟೇಲ್ ಶ್ರೀನಿವಾಸ್ ನಾಗವಾರ ಹಾಗೂ ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...