alex Certify ವಯಸ್ಸಾಗದಂತೆ ಮಾಡುವ ಅಪರೂಪದ ಬೀಜ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಾಗದಂತೆ ಮಾಡುವ ಅಪರೂಪದ ಬೀಜ……!

ಸೌಂದರ್ಯ ಪ್ರಜ್ಞೆ ಇಲ್ಲದ ಮನುಷ್ಯನೇ ಇಲ್ಲವೇನೋ. ಎಲ್ಲರಿಗೂ ತಾನು ಸಣ್ಣ ವಯಸ್ಸಿನ ವ್ಯಕ್ತಿಯಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಇದ್ದೇ ಇರುತ್ತದೆ.

ಆರೋಗ್ಯಕರ ಲೋಟಸ್ ಸಿಡ್ಸ್, ನಟ್ಸ್ ಎಂಬ ಹೆಸರಿರುವ ಕಮಲದ ಬೀಜಗಳನ್ನು ಸಾರಿನಲ್ಲಿ ಕೆಲವರು ಬಳಸುತ್ತಾರೆ. ಈ ಬೀಜಗಳನ್ನು ಒಣಗಿಸಿ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ಸಾಂಪ್ರದಾಯ ಔಷಧಿಗಳನ್ನು ತಯಾರಿಸುತ್ತಾರೆ. ಈ ಬೀಜಗಳಿಂದ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ ಇವುಗಳಲ್ಲಿ ಪ್ರೋಟಿನೊಂದಿಗೆ ಮೆಗ್ನಿಶಿಯಮ್, ಪೊಟ್ಯಾಸಿಯಮ್, ಪಾಸ್ಪರಸ್ ನಂತಹ ಖನಿಜಗಳು ಮತ್ತು ಐರನ್, ಜಿಂಕ್ ನಂತಹ ಲೋಹದಾತುಗಳು ಹೆಚ್ಚಾಗಿವೆ.

ಈ ಕಮಲದ ಬೀಜಗಳಲ್ಲಿ ಎಲ್ ಐ ಸೋಯಾಸ್ಪರೈ ಮಿಟೈಲ್ ಟ್ರಂಸ್ಪರೆಟ್ ಎಂಬ ಎಂಜೈಮ್ ಇದೆ. ಇದು ದೇಹದಲ್ಲಿ ಬಲಹೀನವಾದ ಕಣಜಾಲವನ್ನು ತುಂಬಾ ವೇಗವಾಗಿ ರಿಪೇರಿ ಮಾಡುತ್ತದೆ. ಆದ್ದರಿಂದ ಇವುಗಳನ್ನು ತಿನ್ನುವವರು ಬಹಳಷ್ಟು ಕಾಲ ಯೌವ್ವನದ ಹುಮ್ಮಸ್ಸನ್ನು ಹೊಂದಿರುತ್ತಾರೆ ಹಾಗೂ ಹೆಚ್ಚು‌ ಕಾಲ ಬದುಕುತ್ತಾರೆ ಎನ್ನಲಾಗಿದೆ.

ಕಮಲದ ಬೀಜಗಳ ಈ ಗುಣದ ಕಾರಣದಿಂದ ಬಹಳಷ್ಟು ಸೌಂದರ್ಯ ವರ್ಧಕ ಕಂಪನಿಗಳು ಇದನ್ನು ಬಳಸಿಕೊಂಡಿವೆ. ಇವು ದಂತಗಳ ಆರೋಗ್ಯ ಚೆನ್ನಾಗಿರುವಂತೆಯೂ ನೋಡಿಕೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...