alex Certify ಲುಧಿಯಾನ ಕೋರ್ಟ್ ಬ್ಲಾಸ್ಟ್, ಜರ್ಮನಿಯಲ್ಲಿ SFJ ಉಗ್ರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲುಧಿಯಾನ ಕೋರ್ಟ್ ಬ್ಲಾಸ್ಟ್, ಜರ್ಮನಿಯಲ್ಲಿ SFJ ಉಗ್ರ ಅರೆಸ್ಟ್

ಡಿಸೆಂಬರ್ 23ರಂದು ಲುಧಿಯಾನ ಕೋರ್ಟ್ ನಲ್ಲಾದ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತ್ಯೇಕವಾದಿ ಎಂದು ಗುರುತಿಸಲ್ಪಟ್ಟಿರೊ ಜಸ್ವಿಂದರ್ ಸಿಂಗ್ ಮುಲ್ತಾನಿ ಎನ್ನುವ ವ್ಯಕ್ತಿಯನ್ನ ಜರ್ಮನಿಯಲ್ಲಿ ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಈಗಾಗ್ಲೇ ಪಂಜಾಬ್ ನ ಮಾಜಿ ಪೊಲೀಸ್ ಅಧಿಕಾರಿ ಗಗನ್ ದೀಪ್ ನನ್ನ ಬಂಧಿಸಿದ್ದು, ಈಗ ಮುಲ್ತಾನಿ ಸೆರೆ ಸಿಕ್ಕಿದ್ದಾನೆ. ಉನ್ನತ ಮೂಲಗಳ ಪ್ರಕಾರ ಈತ ಮುಂಬೈ ಹಾಗೂ ದೆಹಲಿಯಲ್ಲಿ ಬ್ಲಾಸ್ಟ್ ನಡೆಸಲು ಪ್ಲ್ಯಾನ್ ರೂಪಿಸುತ್ತಿದ್ದನಂತೆ‌.

ಪಂಜಾಬ್‌ನ ಫಿರೋಜ್‌ಪುರ, ಅಮೃತಸರ ಮತ್ತು ತರಣ್ ತರಣ್ ಜಿಲ್ಲೆಗಳಲ್ಲಿ ಮುಲ್ತಾನಿ ವಿರುದ್ಧ ಇತ್ತೀಚೆಗೆ ಎಫ್‌ಐಆರ್‌ಗಳು ದಾಖಲಾಗಿವೆ. ಪಂಜಾಬ್ ಪೊಲೀಸರು ನೀಡಿದ ಸುಳಿವಿನ ಮೇರೆಗೆ ಭಾರತದ ಇಂಟಲಿಜೆನ್ಸ್ ಅಧಿಕಾರಿಗಳು, ಜರ್ಮನಿಯಲ್ಲಿ ಮುಲ್ತಾನಿಯನ್ನ ಬಂಧಿಸಿದ್ದಾರೆ.

ಗುಪ್ತಚರ ಮಾಹಿತಿಯ ಪ್ರಕಾರ, ಪಂಜಾಬ್ ಮೂಲದ ಕಾರ್ಯಕರ್ತರಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದಿಂದ ಸ್ಫೋಟಕ ವಸ್ತುಗಳನ್ನು ಕಳುಹಿಸುವುದು ಮುಲ್ತಾನಿ ಯೋಜನೆಯಾಗಿತ್ತು.

ಫ್ಲಿಪ್ಕಾರ್ಟ್ ಇಂದು ನೀಡ್ತಿದೆ ಬಂಪರ್ ಆಫರ್..! ಒಂದು ರೂಪಾಯಿಗೆ ಸಿಗ್ತಿದೆ ಈ ಎಲ್ಲ ವಸ್ತು

45 ವರ್ಷದ ಆರೋಪಿ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನ ಇಂಟಲಿಜೆನ್ಸ್ ಬ್ಯೂರೋ ಹಾಗೂ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ಟ್ರ್ಯಾಕ್ ಮಾಡಿದ್ದಾರೆ. ಈತ SFJ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುವಿನ ನಿಕಟ ಸಹವರ್ತಿ ಎಂದು ಹೇಳಲಾಗ್ತಿದ್ದು. ಮೊದಲಿಂದಲು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ವರದಿಯಾಗಿದೆ. ರೈತರ ಪ್ರತಿಭಟನೆಯ ವೇಳೆ ಸಿಂಘು ಗಡಿಯಲ್ಲಿ ರೈತ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಆದರೆ ಈತನ ಪ್ಲ್ಯಾನ್ ನಾನಾ ಕಾರಣಗಳಿಂದ ಮಕಾಡೆ ಮಲಗಿತು.

ಲೂಧಿಯಾನದ ಜೈಲಿನಲ್ಲಿ ಕೋರ್ಟ್ ಸ್ಫೋಟದ ಸಂಚು ರೂಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಜೈಲಿನಲ್ಲಿರುವ ಸಂಚುಕೋರರು ರಹಸ್ಯ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಫೋನ್‌ನಲ್ಲಿ ಸಂಪರ್ಕದಲ್ಲಿದ್ದಾರೆ ಎಂದು ಶಂಕಿಸಿರುವ ಪಂಜಾಬ್ ಪೊಲೀಸರು ಇವರ ಮೇಲೆ ಕಣ್ಣಿಡಲು ತಾಂತ್ರಿಕ ಗುಪ್ತಚರರನ್ನು ನೇಮಿಸಲು ಚಿಂತನೆ ನಡೆಸಿದ್ದಾರೆ. ಸ್ಫೋಟದ ಸ್ಥಳದಲ್ಲಿ ಪತ್ತೆಯಾದ ಡೊಂಗಲ್ ಇದಕ್ಕೆ ಪೂರಕವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...