alex Certify ಫ್ಲಿಪ್ಕಾರ್ಟ್ ಇಂದು ನೀಡ್ತಿದೆ ಬಂಪರ್ ಆಫರ್..! ಒಂದು ರೂಪಾಯಿಗೆ ಸಿಗ್ತಿದೆ ಈ ಎಲ್ಲ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲಿಪ್ಕಾರ್ಟ್ ಇಂದು ನೀಡ್ತಿದೆ ಬಂಪರ್ ಆಫರ್..! ಒಂದು ರೂಪಾಯಿಗೆ ಸಿಗ್ತಿದೆ ಈ ಎಲ್ಲ ವಸ್ತು

ಇ-ಕಾಮರ್ಸ್ ಕಂಪನಿಗಳು ದಿನಕ್ಕೊಂದು ಆಫರ್ ನೀಡ್ತಿರುತ್ತವೆ. ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಫ್ಲಿಪ್ಕಾರ್ಟ್ ಕೂಡ ಹಿಂದೆ ಬಿದ್ದಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಪ್ರತಿದಿನ ಹೊಸ ಆಫರ್ ನೀಡುತ್ತದೆ. ಪ್ರತಿದಿನ ದಿನಸಿ ವಸ್ತುಗಳ ಮೇಲೆ ಅದ್ಭುತ ರಿಯಾಯಿತಿ ನೀಡುತ್ತದೆ. ಇದು ಕೇವಲ ಒಂದು ರೂಪಾಯಿಗೆ ಗೋಧಿ ಹಿಟ್ಟು, ತುಪ್ಪ, ಗೋಡಂಬಿ ಮತ್ತು ಕುಕೀಸ್‌ ನೀಡ್ತಿದೆ.

ಯಸ್. ಇಂದು ಒಂದು ಕೆಜಿ ಗೋಧಿ ಹಿಟ್ಟು ಮತ್ತು ತುಪ್ಪವನ್ನು ಕೇವಲ ಒಂದು ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಆನಂದ ತುಪ್ಪದ 100 ಎಂಎಲ್ ತುಪ್ಪದ ಪ್ಯಾಕೆಟ್ ಬೆಲೆ 55 ರೂಪಾಯಿ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಶೇಕಡಾ 98ರ ರಿಯಾಯಿತಿಯಲ್ಲಿ ಅಂದ್ರೆ ಒಂದು ರೂಪಾಯಿಗೆ 100 ಎಂಎಲ್ ತುಪ್ಪ ಸಿಗ್ತಿದೆ.

ಇಷ್ಟೇ ಅಲ್ಲ ಒಂದು ಕೆಜಿ ಪಿಲ್ಸ್ ಬರಿ ಗೋಧಿ ಹಿಟ್ಟು ಕೂಡ ಒಂದು ರೂಪಾಯಿಗೆ ಸಿಗ್ತಿದೆ. ಅದರ ಮೂಲ ಬೆಲೆ 58 ರೂಪಾಯಿ. ಮೋಲ್ಸಿಯ ಗೋಡಂಬಿಯ 75 ಗ್ರಾಂ ಗೋಡಂಬಿ ಬೆಲೆ 129 ರೂಪಾಯಿಯಿದೆ. ಇಂದು ಫ್ಲಿಪ್ಕಾರ್ಟ್ ನಲ್ಲಿ 9 ರೂಪಾಯಿಗೆ ಸಿಗ್ತಿದೆ. 35 ರೂಪಾಯಿ ಮೌಲ್ಯದ ಕುಕೀಗಳು ಕೂಡ 9 ರೂಪಾಯಿಗೆ ಸಿಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...