alex Certify ಲಿಫ್ಟ್‌ನಲ್ಲಿ ಸಿಲುಕಿಕೊಂಡು ಒದ್ದಾಡಿದ ಆಸೀಸ್ ಸ್ಟಾರ್ ಬ್ಯಾಟ್ಸ್‌ಮನ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಫ್ಟ್‌ನಲ್ಲಿ ಸಿಲುಕಿಕೊಂಡು ಒದ್ದಾಡಿದ ಆಸೀಸ್ ಸ್ಟಾರ್ ಬ್ಯಾಟ್ಸ್‌ಮನ್…..!

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರು ಲಿಫ್ಟ್‌ನಲ್ಲಿ ಸಿಲುಕಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಮೆಲ್ಬೋರ್ನ್‌ನಲ್ಲಿ ಆಸೀಸ್ ಕ್ರಿಕೆಟಿಗರು ತಂಗಿರುವ ಹೋಟೆಲ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸ್ಮಿತ್ ಲಿಫ್ಟ್‌ನಲ್ಲಿ ಸಿಲುಕಿದ್ದರು.

ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸ್ಮಿತ್ ಲಿಫ್ಟ್‌ನಲ್ಲೇ ಪರದಾಡುವಂತಾಯಿತು. ಆಸೀಸ್ ತಂಡದ ಆಟಗಾರ ಮಾರ್ನಸ್ ಲ್ಯಾಬುಸ್ಚಾಗ್ನೆ ಸ್ಮಿತ್ ಅವರನ್ನು ರಕ್ಷಿಸಲು ಪ್ರಯತ್ನಪಟ್ಟರೂ, ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಎಲಿವೇಟರ್ ಬಾಗಿಲು ತೆರೆಯುವ ತಂತ್ರಜ್ಞನನ್ನು ಕರೆಸಲಾಯಿತು. ಹೀಗಾಗಿ ಸುಮಾರು ಒಂದು ಗಂಟೆಗಳ ನಂತರ ಲಿಫ್ಟ್ ನಿಂದ ಸ್ಮಿತ್ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.

ಇನ್ನು ಈ ಎಲಿವೇಟರ್ ನಲ್ಲಿ ಸಿಲುಕಿಕೊಂಡ ಬಗ್ಗೆ ಆಸೀಸ್ ಆಟಗಾರ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನೇನು ತನ್ನ ಮಹಡಿ ಬಂತು ಎನ್ನುವಾಗ ಎಲಿವೇಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಬಾಗಿಲು ಓಪನ್ ಆಗಲಿಲ್ಲ. ಒಳಗಿಂದ ತಾನು ಹೊರಗಿಂದ ಮಾರ್ನಸ್ ಬಾಗಿಲನ್ನು ಹಿಡಿದು ತೆರೆಯಲು ಪ್ರಯತ್ನಿಸಿದ್ರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಿವರಿಸಿದ್ದಾರೆ.

ಅಂತಿಮವಾಗಿ ತಂತ್ರಜ್ಞ ಬಂದು ಬಾಗಿಲು ತೆರೆಯುವಲ್ಲಿ ಯಶಸ್ವಿಯಾದಾಗ, ಆಸೀಸ್ ತಂಡದ ಸಹ ಆಟಗಾರರು ಚಪ್ಪಾಳೆ ತಟ್ಟಿದ್ದಾರೆ. ಆದರೆ, 55 ನಿಮಿಷಗಳ ಹೋರಾಟ ಮಾತ್ರ ಕಠಿಣ ಅನುಭವವಾಗಿತ್ತು ಎಂದು ಹೇಳಿದ್ದಾರೆ.

— Abi Slade (@abi_slade) December 30, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...