alex Certify ‘ಲಗೋರಿ’ ಟೂರ್ನಮೆಂಟ್ ನಡೆಸಲು ಸಿದ್ಧತೆ; ಗೆದ್ದ ತಂಡಕ್ಕೆ ಸಿಗಲಿದೆ ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಗೋರಿ’ ಟೂರ್ನಮೆಂಟ್ ನಡೆಸಲು ಸಿದ್ಧತೆ; ಗೆದ್ದ ತಂಡಕ್ಕೆ ಸಿಗಲಿದೆ ಬಹುಮಾನ

‘ಲಗೋರಿ’ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು ಇಂದು ಮರೆಯಾಗುತ್ತಿವೆ. ಬಚ್ಚಗಳನ್ನು ಒಂದರ ಮೇಲೆ ಒಂದು ಪೇರಿಸಿ ಚೆಂಡಿನಿಂದ ಹೊಡೆದು ಬೀಳಿಸಿ ಬಳಿಕ ಎದುರಾಳಿಯ ಚೆಂಡಿನ ಹೊಡೆತದಿಂದ ತಪ್ಪಿಸಿಕೊಂಡು ಬಿದ್ದ ಬಚ್ಚಗಳನ್ನು ಜೋಡಿಸಿದವರು ವಿಜೇತರಾಗುತ್ತಾರೆ. ಇದೀಗ ಲಗೋರಿ ಆಟವನ್ನು ಮತ್ತೆ ಜನಪ್ರಿಯಗೊಳಿಸಲು ಗೆಳೆಯರ ತಂಡವೊಂದು ಸಿದ್ಧವಾಗಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ಕೊನೆಗಾರ್ರು ಫ್ರೆಂಡ್ಸ್ ಸಂಘಟನೆ ಲಗೋರಿ ಟೂರ್ನಮೆಂಟ್ ಏರ್ಪಡಿಸಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ತಂಡಗಳನ್ನು ಆಹ್ವಾನಿಸಿದೆ. ಪ್ರವೇಶ ದರ 600 ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ವಿಜೇತ ತಂಡಕ್ಕೆ ಬಹುಮಾನವನ್ನೂ ನೀಡಲಾಗುತ್ತದೆ.

ಡಿಸೆಂಬರ್ 10ರ ಒಳಗಾಗಿ ತಂಡವನ್ನು ನೋಂದಾಯಿಸಬೇಕಾಗಿದ್ದು, ಒಂದು ತಂಡದಲ್ಲಿ ಆರು ಮಂದಿ ಆಟಗಾರರಿಗೆ ಅವಕಾಶ ನೀಡಲಾಗುತ್ತದೆ. ಡಿಸೆಂಬರ್ 18ರ ಭಾನುವಾರ ಮಂಡಗದ್ದೆಯ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಹೆಚ್ಚಿನ ವಿವರಗಳಿಗೆ ಜಗನ್ನಾಥ್ (9731144497), ರಾಘವೇಂದ್ರ (8971148141), ಅಭಿಜಿತ್ (8867937419) ಅಥವಾ ಪ್ರವೀಣ್ ಮಂಡಗದ್ದೆ (9483023451) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...