alex Certify ಲಕ್ಷದಲ್ಲಿ ಒಬ್ಬರಿಗೆ ಬೀಳುತ್ತೆ ಇಂಥ ಕನಸು ಇದರ ಹಿಂದಿದೆ ಈ ಅರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷದಲ್ಲಿ ಒಬ್ಬರಿಗೆ ಬೀಳುತ್ತೆ ಇಂಥ ಕನಸು ಇದರ ಹಿಂದಿದೆ ಈ ಅರ್ಥ

ಪ್ರತಿಯೊಬ್ಬರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ. ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಬ್ಬರಿಗೂ ನಿದ್ರೆಯಲ್ಲಿ ಕನಸು ಬೀಳುತ್ತದೆ. ಕೆಲವರಿಗೆ ಸ್ವಪ್ನ ನೆನಪಿದ್ದರೆ ಮತ್ತೆ ಕೆಲವರಿಗೆ ನೆನಪಿರುವುದಿಲ್ಲ. ಸ್ವಪ್ನಗಳು ಚಿತ್ರ-ವಿಚಿತ್ರವಾಗಿರುತ್ತವೆ. ಸಂತೋಷ ನೀಡುವ ಸ್ವಪ್ನದಿಂದ ಹಿಡಿದು ದುಃಖಕರ ಸ್ವಪ್ನಗಳು ಬೀಳುತ್ತವೆ. ಕೆಲ ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಸ್ವಪ್ನ ಮುಂದಾಗುವ ಘಟನೆಗಳಿಗೆ ಮುನ್ಸೂಚನೆ ಎನ್ನಲಾಗುತ್ತದೆ.

ಕೆಲವೇ ಕೆಲವು ಮಂದಿಗೆ ವಿಶೇಷ ಸ್ವಪ್ನಗಳು ಬೀಳ್ತವೆ. ಅವು ಅವ್ರ ಭವಿಷ್ಯವನ್ನು ಬದಲಿಸುತ್ತವೆ. ಬೆಟ್ಟದಲ್ಲಿ ನೀರಿನ ಬುಗ್ಗೆ ಎದ್ದು ಅದನ್ನು ಕುಡಿದಂತೆ ಕಂಡ್ರೆ ಬಹಳ ಶುಭಕರ. ಇದು ಎಲ್ಲರಿಗೂ ಕಾಣುವುದಿಲ್ಲ. ಲಕ್ಷದಲ್ಲಿ ಒಬ್ಬರಿಗೆ ಇಂಥ ಕನಸು ಬೀಳುತ್ತೆ ಎನ್ನಲಾಗುತ್ತದೆ. ಈ ಕನಸು ಬಿದ್ದವರ ಭವಿಷ್ಯ ಉಜ್ವಲವಾಗುತ್ತದೆ ಎಂದೇ ಅರ್ಥ. ಯಶಸ್ಸು, ಸುಖ, ಸಮೃದ್ಧಿ ಪ್ರಾಪ್ತಿಯಾಗುತ್ತದೆ.

ಕನಸಿನಲ್ಲಿ ದೇವರು, ಗುರು, ರಾಜ, ಬಿಳಿ ಬಟ್ಟೆ ಧರಿಸಿದ ಮಹಿಳೆ ಕಾಣಿಸಿಕೊಂಡ್ರೆ ಮುಂದೆ ಶುಭ ದಿನಗಳು ಬರಲಿವೆ ಎಂದರ್ಥ. ಎಲ್ಲವೂ ಮಂಗಳಕರವಾಗಲಿದೆ ಎಂಬುದರ ಸಂಕೇತ.

ಸ್ವಪ್ನದಲ್ಲಿ ಬಂಗಲೆ, ಪರ್ವತ, ಸಿಂಹ, ಕುದುರೆ, ರಕ್ತದಲ್ಲಿ ಸ್ನಾನ ಮಾಡುವುದು, ರಕ್ತ, ಸಾವು, ವೇದ ಧ್ವನಿ ಶ್ರವಣ, ಹೂ, ಮೊಸರು, ಅಕ್ಕಿ, ಇಂದ್ರಧನುಶ್, ಜೂಜು, ಮಳೆಬಿಲ್ಲು ಕಾಣಿಸಿದ್ರೆ ಮುಂದಿನ ದಿನಗಳಲ್ಲಿ ಆರ್ಥಿಕ ವೃದ್ಧಿಯಾಗಲಿದೆ ಎಂದರ್ಥ. ಗೌರವ, ಹಣ, ಯಶಸ್ಸು ಪ್ರಾಪ್ತಿಯಾಗಲಿದೆ ಎಂಬುದರ ಸಂಕೇತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...