alex Certify ರೋಗ ನಿರೋಧಕ ಶಕ್ತಿ ಹೆಚ್ಚಿಸುವ ʼಗೋಧಿ ಹುಲ್ಲುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ʼಗೋಧಿ ಹುಲ್ಲುʼ

ಮನೆಯ ವಾತಾವರಣದಲ್ಲಿ ಅತ್ಯಂತ ಅನಾಯಾಸವಾಗಿ ಬೆಳೆಸಿಕೊಳ್ಳುವಂತಹ ಸಸ್ಯವೇ ಗೋಧಿ ಹುಲ್ಲು. ಇದನ್ನು ಖಾಲಿ ಹೊಟ್ಟೆಗೆ ರಸವಾಗಿ ತೆಗೆದುಕೊಂಡರೆ ಸರ್ವರೋಗ ನಿವಾರಣೆಯಾಗಿ ಉಪಯೋಗವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಇದರಲ್ಲಿ ಅಮಿನೋ ಆಸಿಡ್ಸ್, ಎಂಜೈಮ್ ಗಳಷ್ಟೇ ಅಲ್ಲದೆ ವಿಟಮಿನ್ ಎ, ಸಿ ಅಧಿಕ ಪ್ರಮಾಣದಲ್ಲಿ ಲಭಿಸುತ್ತವೆ. ಇದರಲ್ಲಿ ಇರುವ ವಿಟಮಿನ್ ಇ, ಕೆ, ಬಿ ವ್ಯಾಧಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

* ಈ ರಸದಲ್ಲಿರುವ ಆಂಟಿ ಆಕ್ಸಿಡೆಂಟ್ ಚರ್ಮ ವ್ಯಾಧಿಗಳನ್ನು ನಿವಾರಿಸುತ್ತವೆ. ಒಂದು ಗ್ಲಾಸ್ ಅಷ್ಟು ರಸವನ್ನು ಸ್ನಾನ ಮಾಡುವಂತಹ ನೀರಿನಲ್ಲಿ ಬೆರೆಸಿ ಅರ್ಧ ಗಂಟೆಯ ನಂತರ ಅದೇ ನೀರಿನಲ್ಲಿ ಸ್ನಾನ ಮಾಡಿದರೆ ಶರೀರ ಶುಭ್ರವಾಗುತ್ತದೆ. ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳುವ ಶಕ್ತಿ ಚರ್ಮಕ್ಕೆ ಇರುತ್ತದೆ.

* ಇದರ ರಸವನ್ನು ತಲೆಗೆ ತಿಕ್ಕಿಕೊಂಡು 20 ನಿಮಿಷಗಳ ನಂತರ ಶಾಂಪೂವಿನಿಂದ ತೊಳೆದುಕೊಂಡರೆ ಇದರಲ್ಲಿರುವ ಕ್ಲೆನ್ಸಿಂಗ್ ಗುಣವು ಕೂದಲು ಉದುರದಂತೆ ಮಾಡುತ್ತದೆ.

* ಶರೀರದಲ್ಲಿನ ವ್ಯರ್ಥಗಳನ್ನು ತೊಲಗಿಸುವುದರಲ್ಲೂ ಈ ಗೋಧಿ ಹುಲ್ಲಿನ ರಸ ಪ್ರಮುಖ ಪಾತ್ರ ವಹಿಸುತ್ತದೆ.

ಇಷ್ಟೊಂದು ಲಾಭಗಳು ಇರುವ ಗೋಧಿ ಹುಲ್ಲನ್ನು ನಾವೇ ಬೆಳೆಸಿಕೊಳ್ಳುವುದು ಹೇಗೆ ಅಂದರೆ..

* ಅರ್ಧ ಕಪ್ಪಿನಷ್ಟು ಗೋಧಿಯನ್ನು ಒಂದು ದಿನವಿಡಿ ನೀರಿನಲ್ಲಿ ನೆನೆಸಿಡಬೇಕು. ಆ ನಂತರ ಒಮ್ಮೆ ತೊಳೆದು ಮೆತ್ತನೆಯ ವಸ್ತ್ರದಲ್ಲಿ ಹಾಕಿ ಮೂಟೆ ಕಟ್ಟಿ ಹಾಕಿದರೆ ಎರಡು ದಿನದಲ್ಲಿ ಮೊಳಕೆಗಳು ಬರುತ್ತವೆ.

* ಅಗಲವಾದ ಟ್ರೇ ಇಲ್ಲವೇ ಕುಂಡವೊಂದರಲ್ಲಿ ಮಣ್ಣನ್ನು ತೆಗೆದುಕೊಂಡು ಅದರಲ್ಲಿ ಆ ಗೋಧಿಯನ್ನು ಹಾಕಿ ಬೆರೆಸಬೇಕು. ಅದರ ಮೇಲೆ ಬಟ್ಟೆಯನ್ನು ಮುಚ್ಚಿ ನೀರನ್ನು ಚೆಲ್ಲಬೇಕು.

* ಮೂರು ದಿನಗಳ ಕಾಲ ಹೀಗೆ ಮಾಡಿದರೆ, ಕ್ರಮೇಣ ಹುಲ್ಲು ಕಾಣಿಸುತ್ತದೆ. ಟ್ರೇಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇರಿಸಿ ನೀರು ಚೆಲ್ಲುತ್ತಿದ್ದರೆ ವಾರದ ಅವಧಿಯಲ್ಲಿ ಆರರಿಂದ ಎಂಟು ಅಂಗುಲದಷ್ಟು ಉದ್ದವಾಗಿ ಗೋಧಿಯ ಹುಲ್ಲು ಬೆಳೆಯುತ್ತದೆ. ಈ ಹುಲ್ಲನ್ನು ಪೂರ್ತಿಯಾಗಿ ಅಲ್ಲದಿದ್ದರೂ, ಅಂಗುಲದಷ್ಟು ಬಿಟ್ಟು ಕತ್ತರಿಸಿಕೊಂಡು ಬೇಕಾದ ರೀತಿಯಲ್ಲಿ ಉಪಯೋಗಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...