alex Certify ರೇಷನ್ ಕಾರ್ಡ್ ಗೆ ‌ʼಆಧಾರ್ʼ ಜೋಡಣೆ ಮಾಡದಿದ್ರೆ ಸಿಗೋಲ್ಲ ಪಡಿತರ; ಲಿಂಕ್‌ ಮಾಡಲು ಇಲ್ಲಿದೆ ʼಟಿಪ್ಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಷನ್ ಕಾರ್ಡ್ ಗೆ ‌ʼಆಧಾರ್ʼ ಜೋಡಣೆ ಮಾಡದಿದ್ರೆ ಸಿಗೋಲ್ಲ ಪಡಿತರ; ಲಿಂಕ್‌ ಮಾಡಲು ಇಲ್ಲಿದೆ ʼಟಿಪ್ಸ್ʼ

ನೀವು ಪಡಿತರ ಚೀಟಿ ಹೊಂದಿದವರಾಗಿದ್ದರೆ ಈ ವಿಷಯವನ್ನ ತಿಳಿದುಕೊಳ್ಳಲೇ ಬೇಕು. ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರದಿದ್ದರೆ ನಿಮಗೆ ಈ ಸುದ್ದಿ ತುಂಬಾ ಉಪಯುಕ್ತವಾಗಿದೆ. ಜೂನ್ 30ರವರೆಗೆ ಇದ್ದ ರೇಷನ್ ಕಾರ್ಡ್- ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನ ಸೆಪ್ಟೆಂಬರ್ 30ರ ವರೆಗೆ ವಿಸ್ತಿರಿಸಿದ್ದು, ಗ್ರಾಹಕರಿಗೆ ಅನುಕೂಲವಾಗಿದೆ.

ಆದರೆ ನೀವು ನಿಗದಿತ ಗಡುವಿಗೂ ಮುಂಚೆ ರೇಷನ್ ಕಾರ್ಡ್- ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ನಿಮಗೆ ಇನ್ಮುಂದೆ ಪಡಿತರ ಸಿಗುವುದಿಲ್ಲ. ಹೀಗಾಗಿ 2023 ಸೆಪ್ಟೆಂಬರ್ 30 ರೊಳಗೆ ನಿಮ್ಮ ರೇಷನ್ ಕಾರ್ಡನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವಂತೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಹೇಳಿದೆ.

ಪಡಿತರ ವ್ಯವಸ್ಥೆಯಲ್ಲಿನ ಕಾರ್ಡ್‌ಗಳ ದುರುಪಯೋಗ ಮತ್ತು ಪಡಿತರ ಚೀಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಕೇಂದ್ರ ಸರ್ಕಾರವು ಆಧಾರ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡಲು ಬಯಸಿದೆ.

ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಹಂತಗಳು

ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.

*ಅದರ ನಂತರ ‘ಲಿಂಕ್ ಆಧಾರ್ ವಿತ್ ರೇಷನ್ ಕಾರ್ಡ್’ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.‌

*’ಲಿಂಕ್ ಆಧಾರ್ ಮತ್ತು ಮೊಬೈಲ್ ಸಂಖ್ಯೆ’ ಆಯ್ಕೆಯನ್ನು ಆರಿಸಿ.

* ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.

*ನಿಮ್ಮ ಫೋನ್‌ ಗೆ ಬರುವ OTP ನಮೂದಿಸಿ.

* ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ.

*ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಿದ ತಕ್ಷಣ ನೀವು SMS ಸ್ವೀಕರಿಸುತ್ತೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...