alex Certify ರೂಬಿಕ್ಸ್​ ಕ್ಯೂಬ್​ ಕ್ರೇಜಿ ಸಂಗ್ರಹದೊಂದಿಗೆ ಗಿನ್ನೆಸ್​ ವಿಶ್ವ ದಾಖಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೂಬಿಕ್ಸ್​ ಕ್ಯೂಬ್​ ಕ್ರೇಜಿ ಸಂಗ್ರಹದೊಂದಿಗೆ ಗಿನ್ನೆಸ್​ ವಿಶ್ವ ದಾಖಲೆ…!

ಬುದ್ಧಿಗೆ ಕೆಲಸ ಕೊಡುವ ಜಲ್​ ಕ್ಯೂಬ್​ ಅನೇಕರಿಗೆ ಇಷ್ಟ. ಆದರೆ, ಕೆಲ ಸಮಯದವರೆಗೆ ಇಷ್ಟವಾಗುತ್ತದೆ. ಅದು ಸಲೀಸೆನಿಸಿದ ಕೂಡಲೇ ಅದರ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ.

ಆದರೆ ಇಲ್ಲೊಬ್ಬ ವ್ಯಕ್ತಿಗೆ ಜಲ್​ ಕ್ಯೂಬ್​ ಮೇಲೆ ಅಪರಿಮಿತ ಪ್ರೀತಿ. ಈ ಪ್ರೀತಿ ಎಷ್ಟೆಂದರೆ ಆತ ಅದರ ಸಂಗ್ರಹದ ವಿಷಯದಲ್ಲಿ ವಿಶ್ವದಾಖಲೆ ಮಾಡಿದ್ದಾನೆ.

ಫ್ಲೋರಿಯನ್​ ಕಾಸ್ಟೆನ್​ಮಿಯರ್​ ರೂಬಿಕ್ಸ್​ ಕ್ಯೂಬ್​ ಪ್ರೇಮಿಯಾಗಿದ್ದು, ಅದರ ಕನಸಿನೊಂದಿಗೇ ಜೀವಿಸುತ್ತಿದ್ದಾರೆ. ಕೆಲವು ವರ್ಷಗಳಲ್ಲಿ, ಅವರು ತಿರುಗುವ ಜಲ್​ಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಎಲ್ಲಾ ಆಕಾರಗಳು ಮತ್ತು ಗಾತ್ರಗಳ 1,519 ಜಲ್​ ಹೊಂದಿದ್ದು, ಇದು ವಿಶ್ವ ದಾಖಲೆಯಾಗಿದೆ.

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಫ್ಲೋರಿಯನ್​ರ ಸಂಗ್ರಹವನ್ನು ಪರಿಚಯಿಸಿದ್ದಾರೆ. ಚಿಕ್ಕದಾದ, ದೊಡ್ಡದಾದ ಕ್ಯೂಬ್​ ಇಟ್ಟಿರುವ ಶೆಲ್ಫ್​ ಅನ್ನು ತೋರಿಸಿದ್ದು, ಫ್ಲೋರಿಯನ್​ ಬಾಬ್​ ರಾಸ್​, ಹ್ಯಾರಿ ಪಾಟರ್​, ಕಿಂಗ್​ಡಮ್​ ಹಾರ್ಟ್ಸ್ ಹಾಗೂ ರಿಕ್​ ಮತ್ತು ಮೋಟಿರ್ಯನ್ನು ಒಳಗೊಂಡ ಕ್ಯೂಬ್​ಗಳಿಂದ ತುಂಬಿದ ವಿಶೇಷ ಪ್ಯಾಕೇಜ್​ ಅನ್ನು ಅನ್​ಬಾಕ್ಸ್​ ಮಾಡಿದ್ದಾರೆ. ಜಾಲತಾಣವು ಈ ಸಂಗ್ರಹದಿಂದ ಬೆರಗುಗೊಂಡಿದೆ. ಕೆಲವರು ತಮ್ಮ ಅನುಭವ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಅಧಿಕೃತ ವೆಬ್ಸೈಟ್​ ಪ್ರಕಾರ, ಫ್ಲೋ ಮಿಂಡಲ್​ಹೈಮ್​ನಲ್ಲಿರುವ ತನ್ನ ಮನೆಯಲ್ಲಿ ಸಂರ್ಪೂಣ ಕೋಣೆಯನ್ನು ತನ್ನ ಜಲ್​ಗಳಿಗೆ ಮೀಸಲಿಟ್ಟಿದ್ದಾನೆ. ತನ್ನ ನಿರಂತರವಾಗಿ ಬೆಳೆಯುತ್ತಿರುವ ಸಂಗ್ರಹಣೆಗಾಗಿ ಕೊಠಡಿಯು ತುಂಬಾ ಚಿಕ್ಕದಾಗುತ್ತಿದೆ ಎಂದು ಅವನು ಭಾವಿಸಿದ್ದರೂ ಹೆಂಡತಿ ಮತ್ತು ಅವನ ಮಕ್ಕಳೊಂದಿಗೆ ಅಪರೂಪದ ಮತ್ತು ಅತ್ಯಂತ ಆಸಕ್ತಿದಾಯಕ ಜಲ್​ ಹುಡುಕಾಟ ನಿಲ್ಲಿಸಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...