alex Certify ರುಚಿಕರವಾದ ʼಸಲಾಡ್ʼ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ʼಸಲಾಡ್ʼ ಮಾಡಿ ಸವಿಯಿರಿ

ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುವವರು ಒಮ್ಮೆ ಈ ಸಲಾಡ್ ಮಾಡಿಕೊಂಡು ಸವಿಯಿರಿ. ಹೊಟ್ಟೆ ತುಂಬುವುದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಈ ಸಲಾಡ್.

ಬೇಕಾಗುವ ಸಾಮಾಗ್ರಿಗಳು:

1 ಕಪ್ – ಮೊಳಕೆ ಬಂದ ಹೆಸರುಕಾಳು, ¼ ಕಪ್ – ಈರುಳ್ಳಿ ಸಣ್ಣಗೆ ಹಚ್ಚಿದ್ದು, ¼ ಕಪ್ – ಟೊಮೆಟೊ ಕತ್ತರಿಸಿದ್ದು, 1 ಟೀ ಸ್ಪೂನ್ – ಹಸಿಮೆಣಸು, ¼ ಕಪ್ – ಸೌತೆಕಾಯಿ ಪೀಸ್, ½ ಟೀ ಸ್ಪೂನ್ – ಬ್ಲ್ಯಾಕ್ ಸಾಲ್ಟ್, ½ ಟೀ ಸ್ಪೂನ್ – ಜೀರಿಗೆ ಪುಡಿ, ½ ಟೀ ಸ್ಪೂನ್ – ಚಾಟ್ ಮಸಾಲ, 1 ಟೇಬಲ್ ಸ್ಪೂನ್ – ನಿಂಬೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ¼ ಕಪ್ – ದಾಳಿಂಬೆ ಹಣ್ಣಿನ ಬೀಜ.

ಮಾಡುವ ವಿಧಾನ:

ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಹೆಸರುಕಾಳು, ಈರುಳ್ಳಿ, ಟೊಮೆಟೊ, ಸೌತೆಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಇದಕ್ಕೆ ಜೀರಿಗೆ, ಬ್ಲ್ಯಾಕ್ ಸಾಲ್ಟ್, ಚಾಟ್ ಮಸಾಲ, ಉಪ್ಪು ಸೇರಿಸಿ. ನಂತರ ನಿಂಬೆ ಹಣ್ಣಿನ ರಸ ಸೇರಿಸಿ. ನಂತರ ದಾಳಿಂಬೆ ಹಣ್ಣಿನ ಬೀಜ ಹಾಕಿ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...