alex Certify ರುಚಿಕರವಾದ ʼಬಾಸುಂದಿʼ ಸವಿದಿದ್ದೀರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ʼಬಾಸುಂದಿʼ ಸವಿದಿದ್ದೀರಾ…..?

ಊಟದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಆಸೆ ಆಗುತ್ತದೆ. ಮನೆಯಲ್ಲಿ ಹಾಲು ಇದ್ದರೆ ರುಚಿಕರವಾಗಿ ಬಾಸುಂದಿ ಮಾಡಿಕೊಂಡು ಸವಿಯಿರಿ. ಬೇಗನೆ ರೆಡಿಯಾಗುತ್ತೆ ಜತೆಗೆ ಸಖತ್ ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು:

1 ಲೀಟರ್ – ದಪ್ಪ ಹಾಲು, ಕಂಡೆನ್ಸಡ್ ಹಾಲು – 1/2 ಕಪ್, ಸಕ್ಕರೆ – 3 ಟೇಬಲ್ ಸ್ಪೂನ್, ಏಲಕ್ಕಿ ಪುಡಿ – 1/2 ಟೀ ಸ್ಪೂನ್, ಬಾದಾಮಿ – 1/4 ಕಪ್ ಸಣ್ಣಗೆ ಹೆಚ್ಚಿದ್ದು, ಗೋಡಂಬಿ – 1/4 ಕಪ್  – ಸಣ್ಣಗೆ ಹಚ್ಚಿದ್ದು, ಪಿಸ್ತಾ – ¼ ಕಪ್, ಕೇಸರಿ – ಚಿಟಿಕೆ.

ಮಾಡುವ ವಿಧಾನ:

ಒಂದು ಪ್ಯಾನ್ ಗೆ ಹಾಲು, ಸಕ್ಕರೆ, ಕಂಡೆನ್ಸಡ್ ಮಿಲ್ಕ್ ಹಾಕಿ ಬಿಸಿ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಕಾಯಿಸಿ. ಈ ಹಾಲು ದಪ್ಪಗಾಗುವವರೆಗೆ ಚೆನ್ನಾಗಿ ಕಾಯಿಸಿ.

ನಂತರ ಗ್ಯಾಸ್ ಆಫ್ ಮಾಡಿ ಗೋಡಂಬಿ, ಬಾದಾಮಿ, ಪಿಸ್ತಾ, ಏಲಕ್ಕಿ, ಕೇಸರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೊಂದು ಬೌಲ್ ಗೆ ಇದನ್ನು ಹಾಕಿ ಫ್ರಿಡ್ಜ್ ನಲ್ಲಿಡಿ ನಂತರ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...