alex Certify ರಾಷ್ಟ್ರಧ್ವಜದಿಂದ್ಲೇ ಮುಖ ಒರೆಸಿಕೊಂಡು ಉದ್ಧಟತನ: ವಿಡಿಯೋ ವೈರಲ್‌ ಆಗ್ತಿದ್ದಂತೆ ಕಿಡಿಗೇಡಿಗೆ ತಕ್ಕ ಶಾಸ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರಧ್ವಜದಿಂದ್ಲೇ ಮುಖ ಒರೆಸಿಕೊಂಡು ಉದ್ಧಟತನ: ವಿಡಿಯೋ ವೈರಲ್‌ ಆಗ್ತಿದ್ದಂತೆ ಕಿಡಿಗೇಡಿಗೆ ತಕ್ಕ ಶಾಸ್ತಿ…!

ಉತ್ತರ ಪ್ರದೇಶದ ಬದೌನ್‌ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ರಾಷ್ಟ್ರಧ್ವಜವನ್ನು ತೆಗೆದುಕೊಂಡು ತನ್ನ ಮುಖ ಮತ್ತು ಕುತ್ತಿಗೆಯನ್ನೆಲ್ಲ ಒರೆಸಿಕೊಂಡಿದ್ದ. ಈ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಝರೀಫ್‌ ನಗರ ನಿವಾಸಿ ಶಾರುಖ್‌ ಬಂಧಿತ ಆರೋಪಿ. ರಾಷ್ಟ್ರಧ್ವಜದ ಸಹಾಯದಿಂದ ಮುಖವನ್ನೆಲ್ಲ ಕ್ಲೀನ್‌ ಮಾಡಿಕೊಂಡು ಶಾರುಖ್‌ ಅದನ್ನು ನೆಲಕ್ಕೆ ಹಾಕಿ ಕಾಲಿನಿಂದ ತುಳಿದಿದ್ದ. ಇದು ವಿಡಿಯೋದಲ್ಲಿ ಸ್ಪಷ್ಟವಾಗಿತ್ತು.

ಪ್ರತಿಬಾರಿ ಟೀಂ ಇಂಡಿಯಾ ಕ್ರಿಕೆಟ್‌ ಪಂದ್ಯದಲ್ಲಿ ಸೋತಾಗಲೂ ಈ ಯುವಕ ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದ. ಶಾರುಖ್‌ ವರ್ತನೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೈರಲ್‌ ಆಗಿದ್ದ ವಿಡಿಯೋವನ್ನು ಕೂಡ ಗಮನಿಸಿದ ಪೊಲೀಸರು ಶಾರುಖ್‌ನನ್ನು ಬಂಧಿಸಿ, ಜೈಲಿಗೆ ತಳ್ಳಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...