alex Certify ರಾಯಲ್ ಆರ್ಕಿಡ್ ಸೆಂಟ್ರಲ್ ಗ್ರ್ಯಾಂಡ್ ನಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ – ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಯಲ್ ಆರ್ಕಿಡ್ ಸೆಂಟ್ರಲ್ ಗ್ರ್ಯಾಂಡ್ ನಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ – ಮಾರಾಟ

ಶಿವಮೊಗ್ಗ: ವಜ್ರ ಮತ್ತು ಚಿನ್ನದ ಆಭರಣಗಳ ಮಾರಾಟಗಾರರಾದ ಕೀರ್ತಿಲಾಲ್ಸ್ ಸಂಸ್ಥೆಯಿಂದ ಜುಲೈ 23 ಮತ್ತು 24 ರಂದು ನಗರದ ರಾಯಲ್ ಆರ್ಕಿಡ್ ಸೆಂಟ್ರಲ್ ಗ್ರ್ಯಾಂಡ್ ನಲ್ಲಿ ಚಿನ್ನ ಮತ್ತು ವಜ್ರ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ ಎಂದು ಸಂಚಾಲಕ ಚಿತ್ತೂರು ರಾಜ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೀರ್ತಿಲಾಲ್ಸ್ ಸಂಸ್ಥೆ 80 ವರ್ಷಗಳಿಂದ ತನ್ನ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಕೊಯಮತ್ತೂರಿನಲ್ಲಿ ಪ್ರಮುಖ ಅಂಗಡಿ ಹೊಂದಿರುವ ಈ ಸಂಸ್ಥೆ 5 ಖಂಡಗಳಲ್ಲಿ ವಿಸ್ತರಿಸಿದ್ದು, 3 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ರಾಷ್ಟ್ರದ ಅನೇಕ ಪ್ರಮುಖ ನಗರಗಳಲ್ಲಿ ಶಾಖೆ ಹೊಂದಿದೆ ಎಂದರು.

ಉತ್ತಮ ಗುಣಮಟ್ಟದ ಆಭರಣಗಳನ್ನು ಮಾರಾಟ ಮಾಡುತ್ತಿದ್ದು, ಮುಖ್ಯವಾಗಿ ಬಳೆ, ನೆಕ್ಲೇಸ್, ಕಿವಿಯೋಲೆ, ಉಂಗುರ, ಕಡಗ ಇತ್ಯಾದಿ ಆಭರಣಗಳು ಇಲ್ಲಿ ಸಿಗುತ್ತವೆ. ನಿಯಮಗಳಿಗೆ ಒಳಪಟ್ಟು ರಿಯಾಯಿತಿಯೂ ಇರುತ್ತದೆ.

ಗ್ಲೂಮಿಂಗ್ ಗುರುಕುಲದ ಸಹಯೋಗದೊಂದಿಗೆ ಶಿವಮೊಗ್ಗದಲ್ಲಿ ಎರಡು ದಿನಗಳ ವಿಶೇಷ ಪ್ರದರ್ಶನ ಇದಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಪ್ರದರ್ಶನ ಮತ್ತು ಮಾರಾಟವನ್ನು ‘ಬಿಗ್ ಬಾಸ್’ ಖ್ಯಾತಿಯ ನಟ ಶೈನ್ ಶೆಟ್ಟಿ ಉದ್ಘಾಟಿಸುವರು ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...