alex Certify ‘ರಾತ್ರಿ ಕರ್ಫ್ಯೂ, ಹಗಲು ಚುನಾವಣಾ ರ್ಯಾಲಿ’ – ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರ ಹಾಕಿದ ವರುಣ್​ ಗಾಂಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾತ್ರಿ ಕರ್ಫ್ಯೂ, ಹಗಲು ಚುನಾವಣಾ ರ್ಯಾಲಿ’ – ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರ ಹಾಕಿದ ವರುಣ್​ ಗಾಂಧಿ

ಪಿಲಿಭಿತ್​​ನ ಬಿಜೆಪಿ ಸಂಸದ ವರುಣ್​ ಗಾಂಧಿ ದೇಶದಲ್ಲಿ ಕೊರೊನಾ ಒಮಿಕ್ರಾನ್​ ರೂಪಾಂತರ ಹೆಚ್ಚುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಬೃಹತ್​​ ರ್ಯಾಲಿಗಳನ್ನು ಆಯೋಜಿಸಿದ ಸಂಬಂಧ ಸ್ವಪಕ್ಷದ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.

ರಾತ್ರಿಯಲ್ಲಿ ಕರ್ಫ್ಯೂ ವಿಧಿಸುವುದು ಹಾಗೂ ಬೆಳಗ್ಗೆ ಲಕ್ಷಾಂತರ ಜನರನ್ನು ಸೇರಿಸಿ ರ್ಯಾಲಿಗಳನ್ನು ಮಾಡುವ ಸರ್ಕಾರದ ಕ್ರಮವು ಜನರ ಗ್ರಹಿಕೆಯನ್ನೇ ಮೀರಿದೆ ಎಂದು ವರುಣ್​ ಗಾಂಧಿ ಟ್ಬೀಟಾಯಿಸಿದ್ದಾರೆ.

ಉತ್ತರ ಪ್ರದೇಶದ ಸೀಮಿತ ಆರೋಗ್ಯ ವ್ಯವಸ್ಥೆಗಳನ್ನು ಗಮನಿಸಿದರೆ ಭಯಾನಕ ಓಮಿಕ್ರಾನ್​ ಹರಡುವುದನ್ನು ನಿಲ್ಲಿಸುವುದರ ಬದಲು ಚುನಾವಣಾ ಶಕ್ತಿಯನ್ನು ತೋರಿಸುವುದೇ ನಮ್ಮ ಆದ್ಯತೆಯಾಗಿದೆಯೇ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಶನಿವಾರದಂದು ಗಾಜಿಯಾಬಾದ್​ನಲ್ಲಿ ನಡೆದ ಜನ ವಿಶ್ವಾಸ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಇದು ಮಾತ್ರವಲ್ಲದೇ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್​ ಈ ದಿನಗಳಲ್ಲಿ ಸಾಕಷ್ಟು ರ್ಯಾಲಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಹೆಚ್ಚಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...