alex Certify ರಾಜ್ಯ ಸರ್ಕಾರದಿಂದ ಅರ್ಚಕರಿಗೆ ಸಿಹಿಸುದ್ದಿ : ಕುಟುಂಬಸ್ಥರಿಗೆ `ಉಚಿತ ಕಾಶಿಯಾತ್ರೆ’ ಭಾಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದಿಂದ ಅರ್ಚಕರಿಗೆ ಸಿಹಿಸುದ್ದಿ : ಕುಟುಂಬಸ್ಥರಿಗೆ `ಉಚಿತ ಕಾಶಿಯಾತ್ರೆ’ ಭಾಗ್ಯ

ಬೆಂಗಳೂರು: ರಾಜ್ಯ ಸರ್ಕಾರವು ಅರ್ಚಕರಿಗೆ ಸಿಹಿಸುದ್ದಿ ನೀಡಿದ್ದು, ಅರ್ಚಕರ ಕುಟುಂಬಸ್ಥರಿಗೂ ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ ಯೋಜನೆಯಡಿ ಉಚಿತ ಕಾಶಿ ಯಾತ್ರೆ ಸೌಲಭ್ಯವನ್ನು ನೀಡಿದೆ.

ರಾಜ್ಯ ಸರ್ಕಾರವು ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ ದರ್ಶನ ಯೋಜನೆಯಡಿ ಪ್ರವರ್ಗ ಸಿಗೆ ಬರುವ ದೇವಾಲಯಗಳ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ಉಚಿತ ಕಾಶಿಯಾತ್ರೆಗೆ ಅವಕಾಶ ನೀಡಿದೆ.ಯೋಜನೆಯಡಿ ಈಗಾಗಲೇ  ಮೊದಲ ಬ್ಯಾಚ್ ಉಚಿತವಾಗಿ ಕಾಶಿ ಯಾತ್ರೆಗೆ ಹೊರಟಿದೆ. ಎರಡನೇ ಬ್ಯಾಚ್ ಕಾಶಿಯಾತ್ರೆಗೆ ಮುಂದಿನ ತಿಂಗಳು ಹೊರಡಲಿದೆ. ಇದರ ನಡುವೆ ಈಗ ಮುಜರಾಯಿ ಇಲಾಖೆ ಕುಟುಂಬದವರಿಗೂ ಯಾತ್ರೆಗೆ ಹೋಗಲು ಅವಕಾಶ ನೀಡಿದೆ.

ಕಾಶಿ ಯಾತ್ರೆ  ಯೋಜನೆಯಡಿ ಪ್ರತಿ ಯಾತ್ರೆಯಲ್ಲಿ 60 ಮಂದಿಯಂತೆ ವರ್ಷಕ್ಕೆ 1200 ಅರ್ಚಕರು ಹಾಗೂ ನೌಕರರು ಕಾಶಿ ಯಾತ್ರೆ ಕೈಗೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...