alex Certify ರಾಜ್ಯದ ಮಹಿಳೆಯರೇ ಗಮನಿಸಿ: ಉಚಿತ ಬಸ್ ಪ್ರಯಾಣಕ್ಕೆ ಈ 5 ಕಂಡೀಷನ್ಸ್ ಅಪ್ಲೈ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಮಹಿಳೆಯರೇ ಗಮನಿಸಿ: ಉಚಿತ ಬಸ್ ಪ್ರಯಾಣಕ್ಕೆ ಈ 5 ಕಂಡೀಷನ್ಸ್ ಅಪ್ಲೈ..!

ಬೆಂಗಳೂರು : ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಜೂನ್ 11 ರಿಂದ ಬಸ್ ಗಳಲ್ಲಿ ಉಚಿತ ಪ್ರಯಾಣ (free bus service) ನೀಡುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ. ಆದರೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಕೆಲವು ನಿಬಂಧನೆಗಳನ್ನು ರೂಪಿಸಲಾಗಿದೆ.

1) ಮೊದಲು ಮಹಿಳೆಯರಿಗೆ ಬಸ್ ಗಳಲ್ಲಿ ಪ್ರಯಾಣಿಸಲು ಪ್ರತ್ಯೇಕ ಪಾಸ್ ನೀಡಲಾಗುವುದಿಲ್ಲ ಬದಲಿಗೆ, ಮಹಿಳೆಯರು ತಮ್ಮ ಫೋಟೋ ಹಾಗೂ ವಿಳಾಸ ದೃಢೀಕರಣಗೊಳಿಸುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ವೋಟರ್ ಐಡಿ ತೋರಿಸಿ ಪ್ರಯಾಣಿಸಬಹುದಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

2) ರಾಜ್ಯದ ಒಳಗಡೆ ಎಸಿ ಬಸ್ (AC bus) ಗಳನ್ನು ಬಿಟ್ಟು, ಎಲ್ಲಾ ಬಸ್ ಗಳಲ್ಲೂ ಉಚಿತ ಪ್ರಯಾಣ ಮಾಡಬಹುದು.

3) ಬೆಂಗಳೂರು ನಗರದಲ್ಲಿ ವಾಸವಿರುವ ಮಹಿಳೆಯರು ಬಿಎಂಟಿಸಿಯ (BMTC) ವೋಲ್ವೋ ಬಸ್ ಗಳನ್ನು (ಹವಾ ನಿಯಂತ್ರಿತ) ಹೊರತುಪಡಿಸಿ ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

4) ಕರ್ನಾಟಕದ ಗಡಿಯೊಳಗೆ ಮಾತ್ರ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಅನ್ಯ ರಾಜ್ಯಗಳ ಊರುಗಳಿಗೆ ಹೋಗುವ ಬಸ್ ಗಳಲ್ಲಿ ಉಚಿತ ಪ್ರಯಾಣ( free bus service ಸೌಲಭ್ಯ ನೀಡುವುದಿಲ್ಲ.

5) ಸರ್ಕಾರದ ಎಲ್ಲಾ ನಾಲ್ಕೂ ನಿಗಮಗಳ ಬಸ್ ಗಳಲ್ಲೂ ಉಚಿತ ಪ್ರಯಾಣದ ಅವಕಾಶ ಇರುತ್ತದೆ ಎಂದು ಸರ್ಕಾರ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...