alex Certify ರಾಜಧಾನಿ ಕೈವ್‌ಗೆ ಚಲಿಸದಂತೆ ರಷ್ಯಾ ಟ್ಯಾಂಕ್‌ಗಳನ್ನು ತಡೆದ ಉಕ್ರೇನ್ ನಾಗರಿಕರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಧಾನಿ ಕೈವ್‌ಗೆ ಚಲಿಸದಂತೆ ರಷ್ಯಾ ಟ್ಯಾಂಕ್‌ಗಳನ್ನು ತಡೆದ ಉಕ್ರೇನ್ ನಾಗರಿಕರು: ವಿಡಿಯೋ ವೈರಲ್

ಉಕ್ರೇನ್‌ ಮೇಲಿನ ರಷ್ಯಾದ ಮಿಲಿಟರಿ ದಾಳಿಯು ಸೋಮವಾರ ಐದನೇ ದಿನಕ್ಕೆ ಪ್ರವೇಶಿಸಿದೆ. ದೇಶದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ಗೆ ಲಗ್ಗೆ ಇಟ್ಟಿರುವ ಕೆಂಪು ಸೈನಿಕರು, ರಾಜಧಾನಿ ಕೈವ್‌ಗೆ ಸಮೀಪಿಸುತ್ತಿದ್ದಾರೆ. ಹೀಗಾಗಿ ನೂರಾರು ಮಂದಿ ಉಕ್ರೇನ್ ನಾಗರಿಕರು ರಷ್ಯಾದ ಮಿಲಿಟರಿ ಟ್ಯಾಂಕ್‌ಗಳು ಕೈವ್ ಕಡೆಗೆ ಚಲಿಸದಂತೆ ತಡೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ವರದಿಗಳ ಪ್ರಕಾರ, ರಷ್ಯಾದ ಸೈನಿಕರು ದಿಕ್ಕು ಕೇಳವುದಕ್ಕಾಗಿ ತಮ್ಮ , ಟ್ಯಾಂಕ್‌ಗಳನ್ನು ನಿಲ್ಲಿಸಿದ್ದಾರೆ. ಇದನ್ನರಿತ ಸ್ಥಳೀಯರು ಪುಟಿನ್ ಸೈನ್ಯ ಕೈವ್ ಕಡೆಗೆ ಚಲಿಸದಂತೆ ತಡೆದಿದ್ದಾರೆ. ಚೆರ್ನಿಹಿವ್ ಪ್ರದೇಶದ ಕೊರ್ಯುಕಿವ್ಕಾ ಪಟ್ಟಣದ ಹೊರವಲಯದಲ್ಲಿ ನಾಗರಿಕರು ರಷ್ಯಾ ಸೈನ್ಯಕ್ಕೆ ತಡೆ ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದು, 800ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಸ್ವೀಕರಿಸಿದೆ.

ಭಾನುವಾರ ತೆಗೆದ ಉಪಗ್ರಹ ಚಿತ್ರಗಳು ಸುಮಾರು 64 ಕಿ.ಮೀ ದೂರದಲ್ಲಿರುವ ಕೈವ್‌ನ ದಿಕ್ಕಿನಲ್ಲಿ ಟ್ಯಾಂಕ್‌ಗಳು ಸೇರಿದಂತೆ ರಷ್ಯಾದ ಭೂಪಡೆಗಳ ದೊಡ್ಡ ನಿಯೋಜನೆಯನ್ನು ತೋರಿಸಿದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಇಂಕ್ ಬಿಡುಗಡೆ ಮಾಡಿದ ಚಿತ್ರಗಳು, ರಷ್ಯಾದ ಮಿಲಿಟರಿ ವಾಹನಗಳ ನಿಯೋಜನೆಯನ್ನು ತೋರಿಸಿದೆ. ನಿಯೋಜನೆಯು ಐದು ಕಿ.ಮೀ.ಗಳಷ್ಟು ವಿಸ್ತರಿಸಿದೆ.

— AFP News Agency (@AFP) February 28, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...