alex Certify ರಸ್ತೆಯಲ್ಲಿ ರಾಜಾರೋಷವಾಗಿ ಹೆಜ್ಜೆ ಹಾಕಿದ ಚಿರತೆ; ಸಿಸಿ ಟಿವಿ ದೃಶ್ಯ ಕಂಡು ಭಯಗೊಂಡ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ರಾಜಾರೋಷವಾಗಿ ಹೆಜ್ಜೆ ಹಾಕಿದ ಚಿರತೆ; ಸಿಸಿ ಟಿವಿ ದೃಶ್ಯ ಕಂಡು ಭಯಗೊಂಡ ಜನ

Leopard Still Roaming Free in Ghaziabad? Residents Living in Fear As No Pug Marks Spotted Yetಗಾಜಿಯಾಬಾದ್‌ ಬೀದಿಗಳಲ್ಲಿ ಚಿರತೆಯೊಂದು ಓಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ರಾಜ್ ನಗರ ಪ್ರದೇಶದ ಸೆಕ್ಟರ್‌ 13ರಲ್ಲಿರುವ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ, ಬುಧವಾರ ಬೆಳಗ್ಗಿನ ಜಾವ 2 ಗಂಟೆಯ ವೇಳೆಗೆ ಚಿರತೆ ಅಡ್ಡಾಡುತ್ತಿರುವ ದೃಶ್ಯ ಸೆರೆಯಾಗಿದೆ.

ಇದಾದ ಕೂಡಲೇ ಅರಣ್ಯ ಇಲಾಖೆಯ ವಿಭಾಗೀಯ ಸಿಬ್ಬಂದಿ ಚಿರತೆ ಶೋಧಿಸಲು ಜಾಲ ಹೆಣೆದಿದ್ದಾರೆ. ಇದಾದ ಎರಡು ದಿನಗಳ ಬಳಿಕವೂ ಚಿರತೆಯ ಹೆಜ್ಜೆ ಗುರುತು ಸಿಗದೇ ಇರುವ ಕಾರಣ ಪ್ರಾಣಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.

ಕಳ್ಳಸಾಗಣೆ ಮಾಡಲಾಗುತ್ತಿದ್ದ ಬರೋಬ್ಬರಿ 42 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ

ದೊಡ್ಡ ಬೆಕ್ಕು ಇನ್ನೂ ಹೊರಗೆ ಅಡ್ಡಾಡುತ್ತಿದೆ ಎಂದು ಅನೇಕರು ನಂಬಿದ್ದು, ಭಯದಲ್ಲಿದ್ದಾರೆ. ಈ ಕಾರಣದಿಂದಾಗಿ ಪ್ರದೇಶದ ನಿವಾಸಿಗಳು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಖಾಸಗಿ ಗಾರ್ಡ್‌ಗಳನ್ನು ಚಿರತೆ ಮೇಲೆ ಕಣ್ಣಿಡಲು ಸೂಚಿಸಲಾಗಿದೆ.

ರಸ್ತೆಗಳೆಲ್ಲಾ ಕಾಂಕ್ರೀಟ್‌ ಮಯವಾಗಿರುವ ಕಾರಣ ಚಿರತೆಯ ಹೆಜ್ಜೆ ಗುರುತುಗಳು ಎಲ್ಲೂ ಕಾಣಸಿಕ್ಕಿಲ್ಲ. ಈ ಕಾರಣದಿಂದಾಗಿ ಚಿರತೆಯ ಶೋಧ ಇನ್ನಷ್ಟು ಕಷ್ಟವಾಗಿದೆ.

ಇದೇ ವೇಳೆ, ರಾತ್ರಿ ವೇಳೆ ಹೊರಗೆ ಬರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಸೂಚನೆಗಳನ್ನು ಇಲ್ಲಿನ ನಿವಾಸಿಗಳಿಗೆ ಅರಣ್ಯ ಇಲಾಖೆ ನೀಡಿದೆ.

— IANS Tweets (@ians_india) November 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...