alex Certify ರಷ್ಯಾ ನಾಶಪಡಿಸಿದ್ದ ವಿಶ್ವದ ಅತಿದೊಡ್ಡ ವಿಮಾನ ಮರುನಿರ್ಮಾಣಕ್ಕೆ ಚಿಂತನೆ: ಯೋಜನೆಗೆ ಬೇಕು ಕೋಟಿ ಕೋಟಿ ಹಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ ನಾಶಪಡಿಸಿದ್ದ ವಿಶ್ವದ ಅತಿದೊಡ್ಡ ವಿಮಾನ ಮರುನಿರ್ಮಾಣಕ್ಕೆ ಚಿಂತನೆ: ಯೋಜನೆಗೆ ಬೇಕು ಕೋಟಿ ಕೋಟಿ ಹಣ…!

ಈ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್‌ ಮೇಲೆ ದಾಳಿ ಮಾಡಿದ ರಷ್ಯಾ ಸೇನೆ, ವಿಶ್ವದ ಅತಿದೊಡ್ಡ ವಿಮಾನವನ್ನು ನಾಶಪಡಿಸಿತ್ತು. ಆ ವಿಮಾನವನ್ನು ಮರುನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಆಂಟೊನೊವ್ ಕಂಪನಿ ಈ ಬಗ್ಗೆ ಫೇಸ್ಬುಕ್‌ನಲ್ಲಿ ಬರೆದುಕೊಂಡಿದೆ. ಎರಡನೇ ಆಂಟೊನೊವ್ ಆನ್-225 ಕಾರ್ಗೋ ವಿಮಾನದ ವಿನ್ಯಾಸ ಕಾರ್ಯವನ್ನು ಅದು ಪ್ರಾರಂಭಿಸಿದೆ.

ಈ ವಿಮಾನವನ್ನು ಉಕ್ರೇನಿಯನ್ ಭಾಷೆಯಲ್ಲಿ ಮಿರಿಯಾ ಎಂದು ಕರೆಯಲಾಗುತ್ತದೆ. ಮಿರಿಯಾ ಅಂದ್ರೆ “ಕನಸು” ಎಂದರ್ಥ. ವಿಮಾನ ಮರು ನಿರ್ಮಾಣದ ಬಗ್ಗೆ ಯುದ್ಧ ಕೊನೆಗೊಂಡ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ.  ಫೆಬ್ರವರಿಯಲ್ಲಿ ಉಕ್ರೇನ್‌ನ ಕೀವ್‌ ಬಳಿಯ ವಾಯುನೆಲೆಯಲ್ಲಿ ವಿಮಾನ ನಾಶವಾಗಿತ್ತು. ಈ ಬೃಹತ್ ವಿಮಾನದ ಪುನರ್ನಿರ್ಮಾಣಕ್ಕೆ ಹಲವಾರು ಅಡೆತಡೆಗಳಿವೆ. ಆಂಟೊನೊವ್ ಅಂದಾಜಿಸುವಂತೆ 88-ಮೀಟರ್ ರೆಕ್ಕೆಗಳನ್ನು ಮರುನಿರ್ಮಾಣ ಮಾಡಲು ಕನಿಷ್ಠ 500 ಮಿಲಿಯನ್‌ ಡಾಲರ್‌ ವೆಚ್ಚವಾಗುತ್ತದೆ. ಇಷ್ಟೊಂದು ಹಣವನ್ನು ಎಲ್ಲಿಂದ ತರುವುದು ಎನ್ನುವುದೇ ಬಹುದೊಡ್ಡ ಪ್ರಶ್ನೆ.

ಏಕೆಂದರೆ ರಷ್ಯಾದ ದಾಳಿಯ ನಂತರ ಉಕ್ರೇನ್‌  ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ವಿಮಾನದ ಪುನರ್‌ ನಿರ್ಮಾಣಕ್ಕೆ ಕನಿಷ್ಠ 5 ವರ್ಷಗಳೇ ಬೇಕಾಗಬಹುದು ಅಂತಾ ಅಂದಾಜಿಸಲಾಗಿದೆ. ಒಟ್ಟಾರೆ 3 ಶತಕೋಟಿಗಿಂತ ಹೆಚ್ಚು ವೆಚ್ಚವಾಗುತ್ತದೆ. ಮರು ನಿರ್ಮಾಣ ಕಾರ್ಯದಲ್ಲಿ ಹಳೆಯ ವಿಮಾನದ ಶೇ.30ರಷ್ಟು ಭಾಗ ಮಾತ್ರ ಬಳಕೆಯಾಗಲಿದೆ. ಆಂಟೊನೊವ್‌ ಕಂಪನಿಯು, ಜರ್ಮನಿಯ ಲೀಪ್‌ಜಿಗ್/ಹಾಲೆ ವಿಮಾನ ನಿಲ್ದಾಣದಲ್ಲಿ ವಿಮಾನ ಮಾದರಿಗಳು ಮತ್ತು ಚಿತ್ರಗಳಂತಹ ಸರಕುಗಳನ್ನು ಮಾರಾಟ ಮಾಡಿ ಪ್ರಾಯೋಜಕರನ್ನು ಆಕರ್ಷಿಸಲು ಯೋಜಿಸಿದೆ. ಆರು ಇಂಜಿನ್ ಜೆಟ್ ವಿಮಾನ ಮೊದಲ ಬಾರಿಗೆ ಡಿಸೆಂಬರ್ 1988 ರಲ್ಲಿ ಹಾರಾಟ ನಡೆಸಿತು. ಸಾಂಕ್ರಾಮಿಕದ ಸಮಯದಲ್ಲಿ ಪ್ರಪಂಚದಾದ್ಯಂತ ಕೋವಿಡ್ -19 ಲಸಿಕೆಗಳನ್ನು ಸಾಗಿಸಲು ಇದನ್ನು ಬಳಸಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...