alex Certify ರಷ್ಯಾದ ವಿರುದ್ಧ ಹೋರಾಡಲು ಪಣತೊಟ್ಟ ಉಕ್ರೇನ್‍ನ ಮಾಜಿ ಸುಂದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದ ವಿರುದ್ಧ ಹೋರಾಡಲು ಪಣತೊಟ್ಟ ಉಕ್ರೇನ್‍ನ ಮಾಜಿ ಸುಂದರಿ

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಉಕ್ರೇನ್ ನ ಮಾಜಿ ಸುಂದರಿ ಅನಸ್ತಾಸಿಯಾ ಲೆನ್ನಾ ತಮ್ಮ ದೇಶಕ್ಕಾಗಿ ಪ್ರತಿಜ್ಞೆ ತೊಟ್ಟಿದ್ದಾರೆ. ದೇಶಕ್ಕಾಗಿ ರಷ್ಯಾದ ವಿರುದ್ಧ ಹೋರಾಡಲು ಪಣ ತೊಟ್ಟಿದ್ದಾರೆ.

2015ರಲ್ಲಿ ಮಿಸ್ ಉಕ್ರೇನ್ ಕಿರೀಟ ತೊಟ್ಟಿದ್ದ ಲೆನ್ನಾ ಮಿಲಿಟರಿ ಗೇರ್ ಧರಿಸಿ ಆಕ್ರಮಣಕಾರಿ ರೈಫಲ್‌ನೊಂದಿಗೆ ತನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ಅವರು ಎರಡು ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ಪುಟಿನ್ ಸೈನ್ಯದ ವಿರುದ್ಧ ಹೋರಾಡುವುದಾಗಿ ಘೋಷಿಸಿದ್ದಾರೆ.

ಆಕ್ರಮಣ ಮಾಡುವ ಉದ್ದೇಶದಿಂದ ಉಕ್ರೇನಿಯನ್ ಗಡಿಯನ್ನು ದಾಟಿದ ಪ್ರತಿಯೊಬ್ಬರೂ ಕೊಲ್ಲಲ್ಪಡುತ್ತಾರೆ ಎಂಬ ಕಠೋರ ಸಂದೇಶವನ್ನು ಅವರು ಬರೆದಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಬೆಂಬಲಿಸಿದ ಲೆನ್ನಾ, ಬಲಿಷ್ಠ ನಾಯಕ ಎಂದು ಶ್ಲಾಘಿಸಿದ್ದಾರೆ. ಝೆಲೆನ್ಸ್ಕಿಯೊಂದಿಗೆ ಸೈನಿಕರು ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ಅಂದಹಾಗೆ, ಲೆನ್ನಾ ಬಂದೂಕು ಹಿಡಿದಿರುವ ಫೋಟೋ ಹಂಚಿಕೊಂಡಿರುವುದು ಇದೇ ಮೊದಲಲ್ಲ.  ಆಕೆಯ ಹಿಂದಿನ ಪೋಸ್ಟ್‌ಗಳಲ್ಲಿ, ಅನಸ್ತಾಸಿಯಾ ಲೆನ್ನಾ ಅವರು ಒಳಾಂಗಣ ತರಬೇತಿ ಮೈದಾನಗಳಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ತರಬೇತಿ ಪಡೆದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಉಕ್ರೇನಿಯನ್ ಭೂಮಿಯಲ್ಲಿ ಆಕ್ರಮಣಕಾರರು ಸಾಯುತ್ತಾರೆ. ದಯವಿಟ್ಟು, ಈ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಿ. ಉಕ್ರೇನ್‌ ದೇಶವನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...