alex Certify ಯುವಿ ಕಿರಣಗಳಿಂದ ತ್ವಚೆ ರಕ್ಷಿಸಲು ಈ ʼಆಹಾರʼ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಿ ಕಿರಣಗಳಿಂದ ತ್ವಚೆ ರಕ್ಷಿಸಲು ಈ ʼಆಹಾರʼ ಸೇವಿಸಿ

ಸೂರ್ಯನ ಯುವಿ ಕಿರಣಗಳಿಂದ ತ್ವಚೆ ಹಾಳಾಗುತ್ತದೆ. ಅದಕ್ಕಾಗಿ ನಾವು ಹಲವು ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸುತ್ತೇವೆ.

ಆದರೆ ಅದರ ಜೊತೆಗೆ ಈ ಆಹಾರಗಳನ್ನು ಸೇವಿಸಿದರೆ ಇದು ಯುವಿ ಕಿರಣಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ.

* ವಿಟಮಿನ್ ಸಿ ಸಮೃದ್ಧವಾಗಿರುವ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಸೇವಿಸಿ. ಇದು ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

* ಹಸಿರು ತರಕಾರಿಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಯುವಿ ಕಿರಣಗಳಿಂದ ರಕ್ಷಣೆ ಸಿಗುತ್ತದೆ.

* ಡ್ರೈ ಫ್ರೂಟ್ಸ್ ಗಳಾದ ಗೋಡಂಬಿ, ದ್ರಾಕ್ಷಿ, ಬಾದಾಮಿ ಮುಂತಾದವುಗಳನ್ನು ಸೇವಿಸಿ. ಇದರಿಂದ ಯುವಿ ಕಿರಣಗಳಿಂದ ರಕ್ಷಣೆ ಸಿಗುವುದರ ಜೊತೆಗೆ ಇದರಿಂದಾದ ಹಾನಿಯನ್ನು ಸರಿಪಡಿಸುತ್ತದೆ.

* ಟೊಮೆಟೊ ಚರ್ಮಕ್ಕೆ ತುಂಬಾ ಉತ್ತಮ. ಇದರಲ್ಲಿರುವ ಬ್ಲೀಚಿಂಗ್ ಗುಣ ಯುವಿ ಕಿರಣಗಳಿಂದ ಕಪ್ಪಾದ ನಿಮ್ಮ ತ್ವಚೆಯನ್ನು ಬೆಳ್ಳಗಾಗಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...